ನಿಸ್ವಾರ್ಥ ಸೇವೆ ಫ,ಗು,ಹಳಕಟ್ಟಿ
ಹಗಲಿರುಳು ನೆನೆಯಬೇಕು ನಾವು ಫ,ಗು, ಹಳಕಟ್ಟಿಯವರನ್ನ!
ನಿಜ ಧರ್ಮಕ್ಕಾಗಿ ದುಡಿದು ದಣಿದವರನ್ನ!
ನಿಸ್ವಾರ್ಥ ಸೇವೆ ಮಾಡಿ ಧನ್ಯತೆ ಪಡೆದವರನ್ನ!
ವಚನಸಾಹಿತ್ಯಕ್ಕೆ ಮೆರುಗು ತಂದ ಪುಣ್ಯಾತ್ಮನ !!ಪ!!
ಧಾರವಾಡದಲ್ಲಿ ಹಳಕಟ್ಟೆಯವರ ಮನೆತನ!
ಗುರುಬಸಪ್ಪ ದಾನಾದೇವಿ ಉದರದಿ ಜನನ!
ಶರಣ ಫಕೀರಪ್ಪ ಎಂದು ನಾಮಕರಣ!
ಶರಣರ ರೂಪವೇ ತೊಟ್ಟ ಬಂದ ಭಗವಂತನ!
ಶ್ರದ್ಧೆಯಿಂದ ವಿದ್ಯೆಯನು ಕಲಿತ ಬಾಲಕನ!
ಛಲದಂಕ ಮಲ್ಲನಂತೆ ವಕಾಲತ್ತು ಮಾಡಿದನ!
ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದನ!
ದೂರದೃಷ್ಟಿಯುಳ್ಳ ಶರಣರ ಸಾಲಿನಲ್ಲಿ ನಿಂತ ಗುಣವಂತನ!
ಶರಣರ ವಚನಗಳ ಪರಿಪಾಠ ಕಂಡು ಕರಗಿದನ!
ವಚನ ಸಂಗ್ರಹ ಮಾಡಿ ಹೊತ್ತು ತಿರುಗಿದನ!
ಸ್ಥಿರಾಸ್ತಿ ಮಾರಿ ವಚನಗಳ ಮುದ್ರಿಸಿದನ!
ವಚನಪಿತಾಮಹನೆಂದು ಹಳಕಟ್ಟೆ ಹೆಸರು ಪಡೆದನ!!
ನೋವು ಬಾರದಂತ ನಿಜ ಸುಖವ ಉಂಡಾನ!
ಸಾವು ಬಾರದಂತ ಪದವಿ ಪಡಿದುಕೊಂಡನ!
ಫ,ಗು, ಹಳಕಟ್ಟಿಯವರು ಅಜರಾಮರವಾಗಿ ಉಳಿದವನ!
ಕಂದಪಂಪಯ್ಯನು ನೂರೊಂದು ನಮನ ಸಲ್ಲಿಸಿದನ!!.
ರಚನೆ ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು