ಬರೆದ ನಾಡಿನ ಬೆಳಕು: ಫ.ಗು.ಹಳಕಟ್ಟಿ

ಬರೆದ ನಾಡಿಗೆ
ಬೆಳಕಾಗಿ ಬಂದಿರಿ ನೀವು….
ಶರಣರ ನಾಡನು
ಬೆಳಕಿಗೆ ತಂದವರು ನೀವು….
ಹೆಣ್ಣು ಮಕ್ಕಳ
ಶಿಕ್ಷಣಕ್ಕಾಗಿ
ಶಾಲೆ ತೆರೆದರು ನೀವು….
ಶರಣು ಸಾಹಿತ್ಯವನು
ಸಂಶೋಧನೆ ಮಾಡಿ
ಬಯಲಿಗೆ ತಂದವರು ನೀವು…
ರೈತರಿಗೆ ಹೊಲಗಳಿಗೆ ಒಡ್ಡು
ಹಾಕುವ ವೈಜ್ಞಾನಿಕವ ವಿಧಾನ ತಿಳಿಸಿದಿರಿ ನೀವು….
ಸಹಕಾರ ತತ್ವದಲಿ, ಆರ್ಥಿಕ ಸಹಾಯವಾಗಲೆಂದು ಬ್ಯಾಂಕ್ ಸ್ಥಾಪಿಸಿದವರು ನೀವು….
ಶಿಕ್ಷಣ ಸಂಸ್ಥೆಗಳನು ಹುಟ್ಟು
ಹಾಕಿ ಜ್ಞಾನ ದೀವಿಗೆ
ಹಚ್ಚಿದವರು ನೀವು….
ವಚನ ಸಾಹಿತ್ಯವನು ಮುದ್ರಿಸಿ
ಮನೆ ಮನೆಗಳಿಗೆ
ತಲುಪಿಸಿದವರು ನೀವು….
ವೈಯಕ್ತಿಕ ಹಿತಕ್ಕಿಂತ ಸಾಮಾಜಿಕ
ಹಿತಕ್ಕೆ ನಿಮ್ಮನ್ನ ಸಮರ್ಪಿಸಿ ಕೊಂಡವರು ನೀವು….
ಬರೆದ ನಾಡಿಗೆ ಬೆಳಕಾದವರು
ನೀವು….


ಡಾ. ನಿರ್ಮಲಾ ಬಟ್ಟಲ
೬.೬.೨೦೨೧

Don`t copy text!