ಮಹಾತಾಯಿ ತಿಮ್ಮಕ್ಕ

ಮಹಾತಾಯಿ ತಿಮ್ಮಕ್ಕ

ಬೆಂದು ಬಸವಳಿದು ಬಳಲಿದ
ನೆಲದವ್ವನ ಬಸಿರಿಗೆ
ಹಸಿರು ಉಸಿರು
ತುಂಬಿದ ಮಹಾತಾಯಿ..
ತರುಮರಗಳೇ ನನ್ನ
ಮಡಿಲ ಮಕ್ಕಳೆಂದಾಕೆ ;
ಬಿಸಿಲ ಬೇಗೆಯ ತಾನುಂಡು
ಇಳೆಗೆ ನೆರಳು ನೀಡಿದಾಕೆ ;
ವರುಷಗಳುರುಳಿದರೂ
ಚೈತನ್ಯದ ಚಿಲುಮೆ ಆಕೆ ;
ಇಳಿಸಂಜೆಯ ವಯಸಿನಲೂ
ಮರಗಳ ಪೋಷಿಸಿದಾಕೆ ;
ಸಾಲು ಮರಗಳ ಬೆಳೆಸಿ
ಬದುಕು ಸಾರ್ಥಕಗೊಳಿಸಿದಾಕೆ.
ಚಿಗುರಿದ ಹಸಿರು ಗಿಡಗಳ
ಅಪ್ಪಿ ನಕ್ಕು ನಲಿದಾಕೆ..!
ನಮ್ಮ *ತಿಮ್ಮಕ್ಕ..*
ಹೆಮ್ಮೆಯ ಕನ್ನಡತಿ
ನಿನಗೆ ಕೋಟಿ ಶರಣು…🙏

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!