ಬಸವ ತತ್ವ ಇಂದು

ಬಸವ ತತ್ವ ಇಂದು

ಬಸವ ತತ್ವ ಇಂದು ಆಷಾಢಭೂತಿಗಳ ಷಡ್ಯಂತ್ರದಿಂದ ಸಾರ್ವಕಾಲೀಕ ಸಮತೆ ಸಾಧಿಸಿದ ಬಸವ ಧರ್ಮವು ಕೆಲ ಸ್ವಾರ್ಥಿಗಳ ಹುನ್ನಾರದಿಂದ ಒಂದು ಉದ್ಯೋಗ ಮಾಡಲು ಹೊರಟ ಬಹಿರಂಗ ಪರೋಡಿತನಕ್ಕೆ. ಬಸವ ತತ್ವ ಹರಾಜು ಹಾಕುವುದನ್ನು ನಾವು ಉಗ್ರವಾಗಿ ವಿರೋಧಿಸಿ ತಡೆಗಟ್ಟಬೇಕು. ಯಾವುದನ್ನು ಬಸವಣ್ಣ ಮತ್ತು ಶರಣರು ವಿರೋಧಿಸಿದರೂ ಇಂದು ಮತ್ತೆ ಅಂತಹ ಅನಿಷ್ಟ ಪದ್ಧತಿ ನಮ್ಮ ಆಚರಣೆಯಲ್ಲಿ ಬಂದಿವೆ. ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ ಕಸಬುಗಳಿವೆ. ಜಂಗಮ ಮತ್ತು ಸಮಷ್ಟಿಯ ಸಮಗ್ರ ಅಭಿವೃದ್ಧಿ ಶರಣರ ಗುರಿಯಾಗಿತ್ತು . ಇಂದು ಅನೇಕ ಮಠಗಳು ಆಶ್ರಮ ಪೀಠಗಳು ಬಸವಣ್ಣನವರ ಹೆಸರಿನಲ್ಲಿ ಉದ್ದಿಮೆ ಸ್ಥಾಪಿಸಲು ನಿರ್ಧರಿಸಿವೆ. ಗುರು ಎಂಬ ಅರಿವಿನ ಪ್ರಜ್ಞೆ ವ್ಯಕ್ತಿಯಲ್ಲಿ ಸಾಕಾರಗೊಳಿಸುವ ಉನ್ನತ ಮಾರ್ಗ. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಎಂಬ ಹಳೆಯ ಸಂಪ್ರದಾಯಗಳಿಗೆ ಹೊಸ ವ್ಯಾಖ್ಯಾನ ನೀಡಿ ವ್ಯಕ್ತಿ ಕೇಂದ್ರಿತ ಅರಿವಿನ ಆಂದೋಲನ ಅನುಸಂಧಾನದ ದಿಟ್ಟ ಕ್ರಮ ಅನುಸರಿಸಿದರು.

ಕಾಯಕದ ಮಹತ್ವವನ್ನು ದಾಸೋಹದ ಅನಿವಾರ್ಯತೆಯನ್ನು ಸತ್ಯ ಶುದ್ಧ ಬದುಕಿನ ಶೋಧ ಶರಣರದಾಗಿತ್ತು. ಮರದ ಬಾಯಿ ಬೇರು ಲಿಂಗದ ಬಾಯಿ ಜಂಗಮ ಹೀಗೆ ಸಮಷ್ಟಿಯ ಸಂಪೂರ್ಣ ಕಾಳಜಿ ಜಂಗಮ ತತ್ವ ತನ್ನೊಳಗಿನ ಚೈತನ್ಯದ ಜೊತೆಗೆ ಸಮಷ್ಟಿಯ ಚಲನಶೀಲತೆಯನ್ನು ಕಾಪಾಡುವ ದೃಷ್ಟಿಯಿಂದ ಭಕ್ತ ಇಷ್ಟಲಿಂಗವನ್ನು ತನ್ನ ಸಾಧನೆಯ ಮಾರ್ಗ ಮಾಡಿಕೊಳ್ಳುವ . ಅತ್ಯಂತ ಪ್ರಾಮಾಣಿಕ ಪ್ರಗತಿಪರ ಚಿಂತನೆ ಮತ್ತು ಅನುಭಾವ ಪರಂಪರೆಯನ್ನು ಹೊಂದಿದ ಶ್ರೇಷ್ಠ ಆಂದೋಲನ ಎಂದೆನ್ನಬಹುದು .

ಬಸವಣ್ಣ ವ್ಯಕ್ತಿ ಅಲ್ಲ ಪ್ರಜ್ಞೆ .ಜಾಗತಿಕ ಸಮಾನತೆಯ ಸಂಕೇತ.ಪ್ರಜಾಪ್ರಭುತ್ವದ ಹರಿಕಾರ. ಮಾನವ ಸಂಬಂಧಗಳ ಮತ್ತು ಹಕ್ಕುಗಳ ಮಹಾ ಚಿಂತಕ . ಅನುಭವ ಮಂಟಪ ಸ್ಥಾಪನೆ ಮಾಡಿ ಪ್ರಜಾಸತ್ತಾತ್ಮಕ ಗಣರಾಜ್ಯ ಪರಿಕಲ್ಪನೆ ನೀಡಿದ ಬಸವಣ್ಣ ಜಗವು ಕಂಡ ಶ್ರೇಷ್ಠ ರಾಜಕಾರಣಿ ದಾರ್ಶನಿಕ ಕವಿ ಚಿಂತಕ ಆರ್ಥ ಶಾಸ್ತ್ರಜ್ಞ ಒಬ್ಬ ಅತ್ಯಂತ ವೈಚಾರಿಕ ಪರಿಪೂರ್ಣ ಮಾನವ. ತನ್ನ ಆಚಾರ ವಿಚಾರಗಳನ್ನು ಸಮನ್ವಯಗೊಳಿಸುವ ಸಮಾಜವಾದಿ. ಇಂದು ಇಡೀ ಜಗತ್ತಿನಲ್ಲಿ ಬಸವ ತತ್ವ ಸಿದ್ಧಾಂತಗಳ ಅಧ್ಯಯನ ಅತ್ಯಂತ ಗಂಭೀರವಾಗಿ ಸಾಗಿವೆ.
ಲಿಂಗಾಯತ ಒಂದು ಶ್ರೇಷ್ಟ ಧರ್ಮ ಆದರೆ ಕೆಲ ಸ್ವಾರ್ಥಿಗಳ ಕುತಂತ್ರದಿಂದಾಗಿ ಜಾತಿ ಎಂಬ ಕೊಚ್ಚೆಯಲ್ಲಿ ನಾವು ಶತಮಾನದಿಂದ ನಲುಗಿದ್ದೇವೆ.
ಶರಣ ಧರ್ಮ ಮಠ ಆಶ್ರಮ ವಿರೋಧಿಸಿದ ಧರ್ಮ ಕಾವಿ ವೇಷಧಾರಿಗಳ ಧಿಕ್ಕರಿಸಿದ ಧರ್ಮ
ಅರಿವೇ ಗುರು ಆಚಾರವೇ ಲಿಂಗ ಅನುಭಾವವೇಜಂಗಮ

ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!