ಆ ಗಳಿಗೆ
( ಮೈಸೂರಿನಲ್ಲಿ ನಡೆದ ಅತ್ಯಾಚಾರ..)
ಮರೆಯಲಾಗದ
ಆ ಗಳಿಗೆ..
ಅವಳಿಗೆ..
ಮರುಕಳಿಸಿ
ಉಮ್ಮಳಿಸಿ
ಬಿಕ್ಕುತ್ತಿದೆ
ಆರದ ಗಾಯದ
ಹಸಿ ಹಸಿ ನೋವು..
ಭಾವನೆಗಳ ಮೀಟಿ
ಇರಿದು ಬೆನ್ನಲಿ ಈಟಿ
ಹೆಣ್ತನವ ಚಿವುಟಿ
ಹೊಸಕಿ ಮೆರೆದ
ಪೌರುಷದ ಬೇಟ
ರಕ್ಕಸನ ನೋಟದಲಿ
ಪುಟಿದೆದ್ದು ಉಕ್ಕಿದ ಆ ಗಳಿಗೆ..
ಮರೆಯಲಾಗದ ಗಳಿಗೆ….
ಹೆಣ್ಣಾಗಿದ್ದೇ ತಪ್ಪೇ ಅವಳು..?
ಇಲ್ಲ, ಎದ್ದೇಳು ಹೆಣ್ಣೆ
ಬೆತ್ತಲಾಗಿಸು ಅವರ
ಜಗದ ಜಗುಲಿಯ ಮೇಲೆ..
ಮಾನಭಂಗದ ಕರಿಯ
ಪರದೆ ಸರಿಸಿ ಬಿಡು
ನಿಜದ ಬೆಳಕು ಬೀರು
ನೀನಾಗ ನಿಜವಾದ ಮಾನಿನಿ..!!
–ಹಮೀದಾ ಬೇಗಂ ದೇಸಾಯಿ ಸಂಕೇಶ್ವರ