ಎಂ.ಎಂ.ಕಲ್ಬುರ್ಗಿಯವರ  ನೆನಪಿನಲ್ಲಿ…..

ಎಂ.ಎಂ.ಕಲ್ಬುರ್ಗಿಯವರ  ನೆನಪಿನಲ್ಲಿ…..

ನಮ್ಮ ಎಂ.ಎಂ.ಕಲ್ಬುರ್ಗಿಯವ್ರು
ಯಾರಿಗಾಗಿ ಬರಿದಿದ್ರು,ಯಾತಕ್ಕೆ ಬರಿದಿದ್ರು, ಯಾರಿಗಾಗಿ ಬದುಕಿದ್ರು, ಕೊನೆಗೆ ಯಾರಿಗೋಸ್ಕರ ಜೀವಾ ಕೊಟ್ರು, ಅವ್ರೀಗ್ ಯಾರ್ ಕೊಲೆ ಮಾಡಿದ್ರು, ಯಾಕ್ ಮಾಡಿದ್ರು, ಎಂಬುದೆಲ್ಲ
ಯಾರು ಪೂರ್ತಿಯಾಗಿ ತಿಳ್ಕೊತಾರೋ,
ಅವರೆಲ್ಲರೂ ಬಸವ ತತ್ವವನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡಿದ್ದಾರೆ ಎಂದರ್ಥ. ಹಾಗಂದ ಮ್ಯಾಲೇ
“ಲಿಂಗಾಯತ ಧರ್ಮ”ದ ಬಗ್ಗೆ
ತಂತಾನೇ ಒಲವು ಹುಟ್ಟಿಕೊಳ್ಳುತಾದ,
ಶರಣರ ಆಶಯ, ಉದ್ದೇಶಗಳು ಏನೇನು ಇದ್ದವು ಅವೆಲ್ಲವೂ ಹೆಚ್ಚಿಗೆ ಚಾಲ್ತಿಗ್ ಬರ್ತಾವ್ ಹೌದಲ್ಲವೇ? ಎಲ್ಲರೊಳಗೂ ಮಾನವೀಯ ಮೌಲ್ಯಗಳು ಹುಟ್ಟಿಕೊಂಡಿದ ಮ್ಯಾಲೇ ಸಮಸಮಾಜ ನಿರ್ಮಾಣ
ಆಗ್ಯಾದ್ ಅಂತೇ ಅರ್ಥ.
ಈ ರೀತಿ ನಾವು ಯೋಚ್ನೆ ಮಾಡ್ಬೇಕ್ ಆಗ್ಯಾದ್.

ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ”

ಎನ್ನುವಂತೆ

“ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ

ಹೀಗಾಗಿ ಕೊಂದವರು ಕೊಂದಿದ್ದು ಕಲ್ಬುರ್ಗಿಯವರ ದೇಹಕ್ಕೆ ಮಾತ್ರ, ಹೊರತು ಅವರ ವಿಚಾರಗಳಿಗಲ್ಲ,

ಕೊಂದವರು ಉಳಿಯುವರೇ?


ಬಾಲಾಜಿ ಕುಂಬಾರ,

Don`t copy text!