ಜಗದೋದ್ಧಾರಕ
ದೇವಕಿ ಕಂದ,ಯಶೋದೆಯ ನಂದನಿಗೆ,
ನಂದಕಿಶೋರ್ ನವನೀತ ಚೋರನಿಗೆ,
ಬೆಣ್ಣೆ ಕದ್ದ ಮುದ್ದು ಕೃಷ್ಣನಿಗೆ,
ಜೋಗುಳವ ಹಾಡಿರೆ ಜಗದೋದ್ಧಾರಕನಿಗೆ.
ಕಾಳಿಂಗ ಮರ್ಧನ ಜಗದ್ರಕ್ಷಕನಿಗೆ,
ಧರ್ಮ ಸಂಸ್ಥಾಪನೆಗೆ ಧರೆಗಿಳಿದವಗೆ,
ಗೋವರ್ಧನ ಗಿರಿ ಎತ್ತಿದ ಗಿರಿಧರಗೆ,
ಜೋಗುಳವ ಹಾಡಿರೆ ಜಗದೋದ್ಧಾರಕನಿಗೆ.
ಪಾರ್ಥಸಾರಥಿ ಜಗವಂದ್ಯನಿಗೆ,
ಪೂತನಿ ನಾಶಕ, ಕ್ಲೇಷ ವಿನಾಶಕನಿಗೆ,
ಬಾಯೊಳು ಬ್ರಹ್ಮಾಂಡ ತೋರಿದವಗೆ,
ಜೋಗುಳವ ಹಾಡಿರೆ ಜಗದೋದ್ಧಾರಕನಿಗೆ.
ಗೋವುಗಳ ಪಾಲಕ ಗೋಪಾಲನಿಗೆ,
ಧೂರ್ತ ದೊರೆ ಕಂಸ ಸಂಹಾರಿಗೆ,
ದಶಾವತಾರದಿ ಧರೆಯ ಸಲುಹಿದವಗೆ,
ಜೋಗುಳವ ಹಾಡಿರೆ ಜಗದೋದ್ಧಾರಕನಿಗೆ.
–ಮಂಜುಶ್ರೀ ಬಸವರಾಜ ಹಾವಣ್ಣವರ