ಇಲ್ಲ ಸಾವು ಕಲ್ಬುರ್ಗಿ ಅಪ್ಪಾಜಿಗೆ

ಇಲ್ಲ ಸಾವು ಕಲ್ಬುರ್ಗಿ ಅಪ್ಪಾಜಿಗೆ

ಇಲ್ಲ ಸಾವು ಕಲ್ಬುರ್ಗಿ ಅಪ್ಪಾಜಿಗೆ
ಅವರು ಎಂದಿಗು ಅಮರ
ಕನ್ನಡ ನಾಡಿಗೆ.

ನೀವೊಡೆದ ಗುಂಡೇಟು
ಅವರಣೆಗೆ ಮಾತ್ರ
ಹೊಡೆಯಲಾಗದು ನಿಮಗೆ
ಅವರ ಜೀವನ ಹಿರಿಮೆಯನ್ನ.

ಕಲ್ಬುರ್ಗಿ ಅಪ್ಪನ ಸಾಧನೆ
ನೀವೇನು ಬಲ್ಲಿರಿ?
ಎಲವೊ ನರಭಕ್ಷಕರೆ
ರಕ್ತ ಪಿಪಾಸಿಗಳೆ.

ನಿಮ್ಮ ಮೋತಿ ಮುಖ
ನಿಮಗಷ್ಟೆ ಗೊತ್ತು
ಕಲ್ಬುರ್ಗಿ ಮಲ್ಲಪ್ಪನ ಮುಖ
ಇಡೀ ಜಗಕೆ ಗೊತ್ತು.

ಅವರನ್ನು ಕೊಂದು
ನೀವೇನು ಸಾಧಿಸಿದಿರಿ?
ಕೊಲ್ಲಬನ್ನಿರೀಗ
ಅವರ ವಿಚಾರಗಳನ್ನ.

ಸಾಹಿತ್ಯ ಸಂಶೋಧನೆ
ಕಲ್ಬುರ್ಗಿಯರ ಕೊಡುಗೆ
ನಿಮದೆಲ್ಲ ಏನಿದ್ದರು
ಮೋಸದ ನಡಿಗೆ.

ಸತ್ತು ವರ್ಷಗಳಾದರು
ಇದ್ದಾರೆ ಕಲ್ಬುರ್ಗಿ ಜೀವಂತ
ಕನ್ನಡ ಚರಿತೆಯಲಿ
ವಚನ ಇತಿಹಾಸದಲಿ.

ಹುಟ್ಟಿದ್ದಾರೆ ಮತ್ತೆ
ಕಲ್ಬುರ್ಗಿಯಂತವರು
ಸತ್ಯ ಹೇಳುವುದಕ್ಕೆ
ಮಿಥ್ಯ ಸಾಯಿಸಲಿಕ್ಕೆ.

-ಶ್ರೀಮತಿ ರುದ್ರಮ್ಮ ಅಮರೇಶ್ ಹಾಸಿನಾಳ ಗಂಗಾವತಿ.

Don`t copy text!