ಮೈ ಮರೆತ ಸುಂದರಿ
ಅಲ್ಲಿ ಸುಂದರ ದೃಶ್ಯ.
ಮನವೆಲ್ಲ ಅದೃಶ್ಯ
ಅವನ ಸುತ್ತ ಮುತ್ತ
ಅವಳ ಮನಸು
ಬಯಕೆಯ ಭಾವನೆ
ಮನವೆಲ್ಲ ವೇದನೆ
ಅರಿವು ಇಲ್ಲದೆ ಕುಳಿತ
ಅವಳ ಮನಸು
ಕನ್ನಡಿ ಮುಂದೆ ನಿಂತರು
ಗೆಳತಿಯ ಜೊತೆ ಇದ್ದರೂ
ಬೇಸರ ಛಾಯೆ ಅಲ್ಲಿ
ಅವಳ ಮನಸು
ಭಾವಗಳ ಮಿತಿಯಿಲ್ಲ
ಅವನ ನೆನೆಯದ ದಿನವಿಲ್ಲ
ಏಕಾಂಗಿಯಾಗಿ ಕರೆಯುತ್ತಿದೆ
ಅವಳ ಮನಸ್ಸು
ನಲ್ಲನ ಮಾತು ಕೇಳುವ ಆಸೆ
ಬಳ್ಳಿತರ ಹಬ್ಬಿ ನಿಲ್ಲುವಾಸೆ
ಕೋಗಿಲೆ ದ್ವನಿ ಅಂದವಿಲ್ಲ
ಅವಳ ಮನಸು
ಕಳೆದ ಹಲವು ನೆನಪು
ಮರೆಯದೇ ಮೈ ಮರೆತಳು
ಮಾತುಗಳು ಕೇಳಿಬರುತ್ತಿವೆ
ಅವಳ ಮನಸು
✍️ ಕವಿತಾ ಮಳಗಿ