ರಾಷ್ಟ್ರಮಟ್ಟದ ಕುಸ್ತಿ: ಶಿವಾನಂದಗೆ ಕಂಚು

ರಾಷ್ಟ್ರಮಟ್ಟದ ಕುಸ್ತಿ: ಶಿವಾನಂದಗೆ ಕಂಚು

ವರದಿ- ರೋಹಿಣಿ ಯಾದವಾಡ

ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ಜ್ಯೂನಿಯರ್ ವಿಭಾಗದ 92Kg ಪಂದ್ಯಾವಳಿಯಲ್ಲಿ ಕರ್ನಾಟಕದ ರಾಯಬಾಗ ತಾಲೂಕಿನ ಪರಮಾನಂದವಾಡಿಯ ಶಿವಾನಂದ ಅಂಬಿ ಅವರು ಕಂಚಿನ ಪದಕ ಗೆದ್ದು ಕೊಂಡಿದ್ದಾರೆ.

ಮೂರನೇ ಸ್ಥಾನಕ್ಕೆ ಎದುರಾಳಿ ಬಿಹಾರ್ ರಾಜ್ಯದ ಆಟಗಾರನ ವಿರುದ್ಧ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಜಯ ಗಳಿಸಿದ್ದಾರೆ. ಸದ್ಯ MLIRC ಯಲ್ಲಿ ಪಿ. ಯು .ಸಿ. ಓದುತ್ತಿರುವ ಶಿವಾನಂದ ಅವರಿಗೆ ಕೋಚ್ ರಂಜಿತ್ ಮಹಾಡಿಕ್ ಅವರು ತರಬೇತಿ ನೀಡುತ್ತಿದ್ದಾರೆ.

ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ಜ್ಯೂನಿಯರ್ ವಿಭಾಗದ 92 Kg ಪಂದ್ಯಾವಳಿಯಲ್ಲಿ ಕರ್ನಾಟಕದ ರಾಯಬಾಗ ತಾಲೂಕಿನ ಪರಮಾನಂದವಾಡಿಯ ಶಿವಾನಂದನಿಗೆ ಶಾಲೆಯ ಮುಖ್ಯಸ್ಥರಾದ ಕಮಾಂಡರ್ ಎಸ್ ಎಸ್ ಗಡ್ಕರಿ ತರಬೇತಿ ನೀಡುತ್ತಿದ್ದಾರೆ

ಶಿವಾನಂದರ ಜಯಕ್ಕೆ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಮಾಜಿ ಕಬ್ಬಡಿ ಪಟುಗಳಾದ ಪರಮಾನಂದವಾಡಿಯ ಸುರೇಶ ಅಂಬಿ ಹಾಗೂ ಕಮಲಾ ಅಂಬಿ ಅವರ ಸುಪುತ್ರ ಶಿವಾನಂದರ ಸಾಧನೆಗೆ ಗ್ರಾಮಸ್ಥರು, ಬಂಧು ಬಳಗ, ಸ್ನೇಹಿತರು ಹಿತೈಷಿಗಳು ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Don`t copy text!