ಶೇಗುಣಸಿ ಪೂಜ್ಯರ ಮಹೋತ್ಸವ: ಬೃಹತ್ ಬೈಕ್ ರ್ಯಾಲಿ, ಬಸವ ಜ್ಯೋತಿ ಮೆರವಣಿಗೆ

ಶೇಗುಣಸಿ ಪೂಜ್ಯರ ಮಹೋತ್ಸವ: ಬೃಹತ್ ಬೈಕ್ ರ್ಯಾಲಿ, ಬಸವ ಜ್ಯೋತಿ ಮೆರವಣಿಗೆ


ವರದಿ ರೋಹಿಣಿ ಯಾದವಾಡ
ಶರಣ ಸಂಸ್ಕೃತಿಯ ಮೇಲೆ ನಿಂತಿರುವ ಮಠಗಳಲ್ಲಿ ಕೃಷ್ಣಾ ನದಿ ತೀರದ ಶೇಗುಣಸಿ ಗ್ರಾಮದ ವಿರಕ್ತ ಮಠವು ಒಂದು. ಇಲ್ಲಿ ಬಸವಾದಿ ಪ್ರಮಥರ ಆಶಯಗಳನ್ನು ಬಿತ್ತರಿಸಿ ಶರಣ ಸಂಸ್ಖೃತಿಯನ್ನು ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಇಂಥ ಮಠದ ಪೂಜ್ಯ ಶ್ರೀ ಶಂಕರ‌ ಮಹಾಸ್ವಾಮಿಗಳ ಅಮೃತ ಮಹೋತ್ಸವ, ಡಾ. ಮಹಾಂತ ದೇವರು ಅವರ ನಿರಂಜನ ಪಟ್ಟಾಧಿಕಾರ ಹಾಗೂ ಶಿಕ್ಣ ಸಂಸ್ಥೆಯ ರಜತ ಮಹೋತ್ಸವ ಈ ತ್ರಿವಿಧ ಮಹೋನ್ನತ ಕಾರ್ಯಕ್ರಮಗಳ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ಹಾಗೂ ಬಸವ ಜ್ಯೋತಿಯ ಮೆರವಣಿಗೆ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿದ್ದು ಭಕ್ತಾಧಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದೆ ಎಂದು ಹಂದಿಗುಂದದ ಶ್ರೀ ಶಿವಾನಂದ ಮಹಾಸ್ವಾಮಿಗಳು ನುಡಿದರು.

ಕಾರ್ಯಕ್ರಮದ ನಿಮಿತ್ಯ ಮೇ ೪ ರವರೆಗೆ ಒಂದು ತಿಂಗಳವರೆಗೆ ನಿತ್ಯ ಸಾಯಂಕಾಲ ೭ ರಿಂದ ೯ ರವರೆಗೆ ಭೀಮಕವಿಯ ” ಬಸವಪುರಾಣ ” ಜರುಗಲಿದೆ. ತನಿಮಿತ್ತ ಕೂಡಲಸಂಗಮದಿಂದ ಆಗಮಿಸಿದ ಬಸವಜ್ಯೋತಿಯನ್ನು ಹಾಗೂ ಬಸವಣ್ಣನವರ ಮೂರ್ತಿಯನ್ನು ಅಥಣಿ ಪಟ್ಟಣದಿಂದ ಶೇಗುಣಸಿ ಗ್ರಾಮಕ್ಕೆ ಮೆರವಣಿಗೆ ಮೂಲಕ ೭೭೦ ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡ ಸಮಯದಲ್ಲಿ ಮೇಲಿನಂತೆ ಆಶೀರ್ವಚನ ಮಾಡಿದರು. ಪೂಜ್ಯ ಶಂಕರ ಮಹಾಸ್ವಾಮಿಗಳು, ಡಾ.ಮಹಾಂತ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಗ್ರಾಮದ ಮುಖಂಡರಾದ ಮಾಜಿ ಜಿಪ ಸದಸ್ಯ ಶ್ರೀಶೈಲ ನಾರಗೊಂಡ, ಅಶೋಕ ಅಮ್ಮಣಗಿ , ಗುರುರಾಜ ಪಾಟೀಲ, ತಮ್ಮಣ್ಣಪ್ಪ ತೇಲಿ, ರೈತ ಮುಖಂಡ ಶಿವರಾಯ ಯಲಡಗಿ, ಪರಗೌಡ ರಾಚಪ್ಪನವರ, ವೆಂಕಪ್ಪ ಬನ್ನಿಕೊಪ್ಪ ,ಸುನೀಲ ಅವಕ್ಕನವರ, ಕುಮಾರ ಸತ್ತಿಗೌಡರ, ಚೇತನ ಯಲಡಗಿ ಮೊದಲಾದವರಿದ್ದರು.

ಈ ಪೂರ್ವದಲ್ಲಿ ಅಥಣಿಯಲ್ಲಿ ಗ್ರಾಮದೇವತೆ ಸಿದ್ದೇಶ್ವರ ದೇವಾಲಯದ ಮುಂದೆ ವಿದಾನ ಪರಿಷತ್ತ ಸದಸ್ಯ ಲಕ್ಷ್ಮಣ ಸವದಿ, ಗಚ್ಚಿನಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು. ಡಾ ಮಹಾಂತ ದೇವರು ಮೊದಲಾದವರು ಬಸವ ಜ್ಯೋತಿಯನ್ನು ಬರಮಾಡಿಕೊಂಡರು.

Don`t copy text!