ಮೈಸೂರು ಬಸವಾಭಿಮಾನಿಗಳಿಗೆ ಸಂತಸದ ಸುದ್ಧಿ
e- ಸುದ್ದಿ ಪುಣೆ
ಬಸವ ತತ್ವ ಜಗದ ತತ್ವ” ಎಂಬುದು 12ನೇ ಶತಮಾನದ ಮಹಾನ್ ಮಾನವತಾವಾದಿ ಮತ್ತು ಸಮಾಜ ಸುಧಾರಕ ಬಸವಣ್ಣನವರ ತತ್ವಗಳು ಕೇವಲ ಒಂದು ಜಾತಿ ಅಥವಾ ಪ್ರದೇಶಕ್ಕೆ ಸೀಮಿತವಾಗದೆ, ಇಡೀ ವಿಶ್ವಕ್ಕೆ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿವೆ ಎಂಬುದನ್ನು ಸಾರುತ್ತದೆ. ಇಂದಿನ ಆಧುನಿಕ ಜಗತ್ತಿನ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಶಾಶ್ವತ ಪರಿಹಾರಗಳಿವೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದು ಒಂದು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಯಾಗಿದ್ದು ಇತ್ತೀಚೆಗೆ ಅಕ್ಟೋಬರ್ 24 ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ಅತ್ಯಂತ ಯಶಸ್ವಿಗೊಂಡಿದೆ. ಇದರ ಜೊತೆಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಕರ್ನಾಟಕ ರಾಜ್ಯ ಘಟಕವೂ ಕೂಡ ಉದ್ಘಾಟನೆಯಾಯಿತು.
ಈಗ ಮೈಸೂರ ಜಿಲ್ಲೆಯಲ್ಲಿ ಬಸವ ತತ್ವ ಜಗದ ತತ್ವ ಎನ್ನುವ ಶೀರ್ಷಿಕೆಯೊಂದಿಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರವು ಮೈಸೂರು ಜಿಲ್ಲಾ ಬೇರೆ ಬೇರೆ ತಾಲ್ಲೂಕು ಹೋಬಳಿ ನಗರದ ಬಡಾವಣೆಗಳಲ್ಲಿ ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ಮುಂದಾಗಿದೆ. ಆಸಕ್ತ ಬಸವ ಭಕ್ತರು ಶ್ರೀ ವಿಜಯಕುಮಾರ ಏಚ್ 7760458537 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಬಸವ ತತ್ವದಲ್ಲಿ ಪರಿಹಾರ ಇದೆ.
ಶ್ರೀ ವಿಜಯಕುಮಾರ ಏಚ್
ಮಹಾಪ್ರಧಾನ ಕಾರ್ಯದರ್ಶಿ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಕರ್ನಾಟಕ ರಾಜ್ಯ ಘಟಕ
