ಪತ್ರಕರ್ತರಿಗೆ ನಗರಸಭೆ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲಿಡಲು ಮನವಿ

ಪತ್ರಕರ್ತರಿಗೆ ನಗರಸಭೆ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲಿಡಲು ಮನವಿ

e-ಸುದ್ದಿ  ರಾಯಚೂರು

ನಗರದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ನಗರಸಭೆ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲು ಇರಿಸುವಂತೆ ಪತ್ರಕರ್ತರ ಸಂಘದಿಂದ ಪೌರಾಯುಕ್ತ, ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ನಗರದ ನಗರಸಭೆಯ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 2022-2023ನೇ ಸಾಲಿನ ಆಯ್ಯವಯ ಮಂಡನೆ ಪೂರ್ವಭಾವಿ ಸಭೆಯಲ್ಲಿ, ಉಪಾಧ್ಯಕ್ಷೆ ನರಸಮ್ಮ ಹಾಗೂ ಪೌರಾಯುಕ್ತ ಮುನಿಸ್ವಾಮಿಯವರಿಗೆ, ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ ಸುಮಾರು 100 ಜನ ಪ್ರತಕರ್ತರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತೀವ್ರ ತರದ ಆರೋಗ್ಯದ ಸಮಸ್ಯೆ ಎದುರಾಗ ವೈದ್ಯಕೀಯ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ ನಗರಸಭೆಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸುವ 25 ಲಕ್ಷ ರೂಪಾಯಿ ಮೀಸಲು ಇರಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಅಲ್ಲದೇ ಬೇರೆ ಜಿಲ್ಲೆಗಳಲ್ಲಿ ನಗರಗಳಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ ಅನುದಾನವನ್ನು ಮೀಸಲು ಇರಿಸಿರುವ ಉದಾಹರಣೆಯಿವೆ ಎಂದು ಗಮನಕ್ಕೆ ತರುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಹಿರಿಯ ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಬಸವರಾಜ ನಾಗಡದಿನ್ನಿ, ಆರ್.ಗುರುನಾಥ, ಜಗ್ನನಾಥ ದೇಸಾಯಿ, ಸಿದ್ದಯ್ಯ ಸ್ವಾಮಿ, ಕೆ.ಸತ್ಯನಾರಾಯಣ, ವೆಂಕಟೇಶ್ ಹೂಗಾರ, ಪತ್ರಕರ್ತರಾದ ಜಗ್ನನಾಥ ಪೂಜಾರಿ, ಜಯಕುಮಾರ ದೇಸಾಯಿ, ಸಣ್ಣ ಈರಣ್ಣ,  ರಾಚಯ್ಯ ಸ್ವಾಮಿ, ಬಾಬ ಹಟ್ಟಿ ಕ್ಯಾಮರಮಾನ್ ದುರ್ಗೇಶ್ ಇದ್ದರು.

Don`t copy text!