ಅಥಣಿ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ:
ಮಹಾತಪಸ್ವಿ ಶಿವಯೋಗಿಗಳಿಂದ ಅಥಣಿ ಪುಣ್ಯತಾಣ-
ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಅಭಿಮತ.
ವರದಿ. ರೋಹಿಣಿ ಯಾದವಾಡ
ಅಥಣಿ ಕ್ಷೇತ್ರವು ನಾಡಿನಾಚೆಗೂ ಪ್ರಸಿದ್ಧಿ ಪಡೆಯುವಲ್ಲಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳು ಕಾರಣ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಥಣಿಯ ಮಲ್ಲಿಕಾರ್ಜುನ ದೇವಸ್ಥಾನದ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಮೇಲಿನಂತೆ ನುಡಿಯುತ್ತ. ಅಥಣಿಗೂ ಶ್ರೀಶೈಲಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾದ್ಯರು ಶಿವಯೋಗಿಗಳ ಪರಮ ಭಕ್ತರು. ವಾಗೀಶರು ಚಿಕ್ಕರಿದ್ದಾಗಲೇ ಅಥಣಿ ಶಿವಯೋಗಿಗಳು ” ನೀನು ಗುಡ್ಡಕ್ಕೆ ಗುರುವಾಗುವೆ” ಎಂದು ಆಶೀರ್ವದಿಸಿದ್ದರು. ಅದು ನಿಜವಾಗಿ ಶ್ರೀಶೈಲ ಗಿರಿಗೆ ಗುರುವಾದರು ಹೀಗಾಗಿ ಶ್ರೀಶೈಲ ದೇವಸ್ಥಾನದ ಮುಖ್ಯದ್ವಾರದಲ್ಲಿ ಅಥಣಿ ಶಿವಯೋಗಿಗಳ ಭಾವಚಿತ್ರವಿದೆ. ಅದಕ್ಕೆ ತಲೆಬಾಗಿ ಒಳಬರುವಂತಿದೆ. ವಾಗೀಶ ಜಗದ್ಗುರುಗಳು ಶಿವಯೋಗಿಗಳ ಕುರಿತಾಗಿ ಬರೆದ ಸುಪ್ರಭಾತವು ಸುಪ್ರಸಿದ್ದವಾಗಿದೆ ಎಂದರು.
ಮುಂದುವರಿದು ದೇವಸ್ಥಾನ ಎಷ್ಟೇ ವರುಷ ಕಟ್ಟಿದರೂ,ಎಷ್ಟೇ ಬೃಹದಾಕಾರವಿದ್ದರೂ ಅದು ಕಳಸವಿಟ್ಟಾಗಲೇ ಪರಿಪೂರ್ಣವಾಗುವುದು. ಕಳಸಗಳು ಭಕ್ತ ಮತ್ತು ದೇವರ ನಡುವಿನ ಟವರ್ ಇದ್ದಂತೆ. ದೇವರ ಸಂಪರ್ಕದ ಮಧ್ಯವರ್ತಿಗಳು ಕಳಸಗಳು ಅದು ಕಂಚು, ತಾಮ್ರ,ಹಿತ್ತಾಳೆ,ಬೆಳ್ಳಿ,ಬಂಗಾರ ಅಥವಾ ಪಂಚಲೋಹದ್ದು ಹೀಗೆ ಲೋಕದಿಂದಲೇ ತಯಾರಾಗಿರಬೇಕು.
ಮಲ್ಲಯ್ಯನ ಮಹಿಮೆ ಅಪಾರ. ಪ್ರತಿ ಊರಿಗೊಂದು ಮಲ್ಲಯ್ಯ ದೇವಸ್ಥಾನ ಇದ್ದೇ ಇರುತ್ತದೆ. ಶ್ರೀಶೈಲಕ್ಕೆ ಅಪಾರ ಭಕ್ತಾಧಿಗಳಿದ್ದು ಯುಗಾದಿಯಂದು ಲಕ್ಷಾಂತರ ಜನರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ . ಒಬ್ಬ ವ್ಯಕ್ತಿ ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮಾಡಿದರೆ, ಕೆಲವರು ಮರಗಾಲು ಕಟ್ಟಿಕೊಂಡು, ಕ್ವಿಂಟಲ್ ಧಾನ್ಯ ಹೊತ್ತು ಬಂದರೆ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಹೆಣ್ಣುಮಗಳೊಬ್ಬಳು ದೀಡನಮಸ್ಕಾರ ಹಾಕುತ್ತ ಶ್ರೀಶೈಲ ಬಂದದ್ದು ನೋಡಿದರೆ ಭಕ್ತರ ಭಕ್ತಿ, ಮಲಯ್ಯನ ಶಕ್ತಿ ಅನನ್ಯ ಎಂದರು.ಈಗ ಭಕ್ತಾದಿಗಳ ಅನುಕೂಲಕ್ಕೆ ಅನೇಕ ಸೌಲಭ್ಯ ಕಲ್ಪಿಸುವ ಯೋಜನೆ ಇರುವುದಾಗಿ ಹೇಳಿ ದಾನ ದಾಸೋಹ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು.
ಶೆಟ್ಟರಮಠದ ಪೂಜ್ಯ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ ಬಹಳ ದಿನಗಳ ಕನಸು ನನಸಾಗಿದ್ದಕ್ಕೆ ಅಥಣಿ ಭಕ್ತರು ಸಂತಸ ಪಟ್ಟಿದ್ದಾರೆ ಎಂದರು.
ಶ್ರೀ ಮಲ್ಲಿಕಾರ್ಜು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಮಹಾಜನ ದೇವಸ್ಥಾನದ ಕಳಸ ದಾನಿಗಳನ್ನು ಅಭಿನಂದಿಸಿ, ದೇವಸ್ಥಾನದ ಸಭಾಭವನವಿದ್ದು ಕಡಿಮೆ ದರದಲ್ಲಿ ಶ್ರೀಸಾಮಾನ್ಯರು ಮದುವೆ. ಸೀಮಂತ, ಹುಟ್ಟುಹಬ್ಬ ಹೀಗೆ ವಿವಿಧ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ ಎಂದರು.
ಈ ಸಮಯದಲ್ಲಿ ಕಳಸದ ದಾನಿಗಳಾದ ಗೆಜ್ಜಿ ಕುಟುಂಸ್ಥರನ್ನು ಸನ್ಮಾನಿಸಲಾಯಿತು. ದೇವಸ್ಥಾನಕ್ಜೆ ಸಹಕರಿಸಿದ ಅಪ್ಪಾಸಾಬ ಖಟಾವಿ, ಭರಮು ಬಡಿಗೇರ, ಗಣಪತಿ ಗಾಡಿವಡ್ಡರ ಮೊದಲಾದವರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ಅಥಣಿ ವಿದ್ಯಾವರ್ಧಕ ಶಾಲಾ ಮಕ್ಕಳಿಂದ ಪ್ರಾರ್ಥನೆಯಾಯಿತು. ಪಿ.ಆರ್ ಮಹಾಜನ ಸ್ವಾಗತಿಸಿದರು. ರೋಹಿಣಿ ಯಾದವಾಡ ನಿರೂಪಿಸಿದರು.
ಈ ಸಮಯದಲ್ಲಿ ಚಂದ್ರಶೇಖರ ಯಲ್ಲಟ್ಟಿ, ಶಿವಯೋಗಿ ಗೆಜ್ಜಿ, ಮುರಗೆಪ್ಪ ಕೊಪ್ಪದ, ರಾಜು ಕೊಳಲಗಿ, ಪ್ರಭು ಕಾರವೇಕರ, ಬಸಪ್ಪ ಗೆಜ್ಜಿ, ಮಹಾಂತೇಶ ಉಕ್ಕಲಿ, ಶಿವಕುಮಾರ ತೆಲಸಂಗ, ಪಂಚಾಕ್ಷರಿ ಅಳ್ಳಿಮಟ್ಟಿ, ಸಂಗಪ್ಪ ಉಣ್ಣಿ, ಚನ್ನಬಸವ ನಿಡೋಣಿ ಮೊದಲಾದವರು ಉಪಸ್ಥಿತರಿದ್ದರು.