ಘನಮಠೇಶ್ವರ ಮಠದಿಂದ ಆನಂದ ಮಲ್ಲಿಗವಾಡ ಅವರಿಗೆ ಕೃಷಿಋಷಿ ಪ್ರಶಸ್ತಿ ಪ್ರಧಾನ

 ಘನಮಠೇಶ್ವರ ಮಠದಿಂದ ಆನಂದ ಮಲ್ಲಿಗವಾಡ ಅವರಿಗೆ ಕೃಷಿಋಷಿ ಪ್ರಶಸ್ತಿ ಪ್ರಧಾನ

 

e- ಸುದ್ದಿ ಮಸ್ಕಿ

ಕೃಷಿ ಮತ್ತು ಕೃಷಿ ಕಾಯಕಕ್ಕೆ ಪೂರಕವಾಗಿ ಶ್ರಮಿಸುವ ವ್ಯಕ್ತಿಗಳಿಗೆ ತಾಲ್ಲೂಕಿನ ಘನಮಠಶ್ವರ ಮಠದಿಂದ ಪ್ರತಿವರ್ಷ ಘನಮಠೇಶ್ವರ ಪೂಣ್ಯಸ್ಮರೋಣತ್ಸವದಲ್ಲಿ ಕೃಷಿಋಷಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಪ್ರಸಕ್ತ ವರ್ಷ ಕೆರೆ ಪುರುಷ ಎಂದೆ ಪ್ರಸಿದ್ಧರಾದ ಆನಂದ ಮಲ್ಲಿಗವಾಡ ಅವರು ಆಯ್ಕೆಯಾಗಿದ್ದಾರೆ. ಡಿ.೨೩ ಮಂಗಳವಾರ ಸಂಜೆ ೭ ಗಂಟೆಗೆ ಘನಮಠೇಶ್ವರ ಮಠದಲ್ಲಿ ಇಲಕಲ್ಲಿನ ಶ್ರೀಗುರುಮಹಾಂತ ಸ್ವಾಮೀಜಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಶ್ರೀಗುರುಬಸವ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಆನಂದ ಮಲ್ಲಿಗವಾಡ ಅವರು ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕು ಕರಮುಡಿ ಗ್ರಾಮದವರು. ಮ್ಯಾಕನಿಕಲ್ ಇಂಜಿನಿಯರ್ ಪದವಿಧರರಾದ ಅವರು ೧೫ ವರ್ಷ ಬೆಂಗಳೂರಿನಲ್ಲಿ ಆಟೋಮೋಟಿವ್ ಹಾಗೂ ಏರೋಸ್ಪೇಸ್ ಕ್ಷೇತ್ರದಲ್ಲಿ ಗ್ರೂಪ್‌ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಸಂಪೂರ್ಣವಾಗಿ ಕೆರೆಗಳ ಪೂನರ್ ಜೀವನ ಗೊಳಿಸುವ, ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ.
ಇದುವರೆಗೂ ನೂರಾರು ಕೆರೆಗಳನ್ನು ಉಳಿಸಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ೩೫ ಕ್ಕೂ ಹೆಚ್ಚು ಕೆರೆಗಳನ್ನು ಪುನರ್ ಜೀವನಗೊಳಿಸುವ ಮೂಲಕ ಬೆಂಗಳೂರಿನ ಅಂತರ್ಜಲ ಅಭಿವೃದ್ದಿಗೆ ಕಾರಣ ಪುರುಷರಾಗಿದ್ದಾರೆ.
ಭಾರತದ ೧೨ ರಾಜ್ಯಗಳಲ್ಲಿ ಸರ್ಕಾರಕ್ಕೆ ಜಲಸಂರಕ್ಷಣಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದು ಲೇಖ್ ಮ್ಯಾನ್ ಆಫ್ ಇಂಡಿಯಾ- ಭಾರತ ದೇಶದ ಕೆರೆಗಳ ಮಾನವ ಎಂಬ ಗೌರವಪೂರ್ಣ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರ ಅಪಾರ ಸೇವೆಯನ್ನು ಗುರುತಿಸಿ ಗೀತಮ್ ಯೂನಿವರ್ಸಿಟಿಯವರು ಗೌರವ ಡಾಕ್ಟರೇಟ್ ಪದವಿ ನೀಡಿದ್ದಾರೆ.
ಬಿಬಿಸಿ, ನ್ಯೂಯಾರ್ಕ ಟೈಮ್ಸ್, ಜಪಾನ್ ಟೈಮ್ಸ್ ಪೋರ್ಬ್ಸ, ಆಲ್ ಜಜೀರಾ ಸೇರಿದಂತೆ ಅಂತರಾಷ್ಟಿಯ ಪತ್ರಿಕೆಗಳು ಇವರನ್ನು ಗುರುತಿಸಿ ಇವರ ಸಾಧನೆಯನ್ನು ವಿಶ್ವವೇ ತೊರಿಸಿದ್ದಾರೆ.

Don`t copy text!