e-ಸುದ್ದಿ ಓದುಗರಿಗೆಲ್ಲ ವೀರೇಶ ಸೌದ್ರಿ ಮಾಡುವ ಪ್ರಣಾಮಗಳು
ನನ್ನದೊಂದು ಮನವಿ
ಪ್ರೀಯ ಓದುಗರೇ
ಬಹು ದಿನಗಳ ನಂತರ ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದ ಅವಿರತವಾಗಿ e-ಸುದ್ದಿ ಅಂತರಜಾಲ ಪತ್ರಿಕೆ ಪ್ರಕಟವಾಗುತ್ತಿದೆ.
ನಾನು ಆರಂಭಿಸಿದಾಗ ಇಷ್ಟು ಬೇಗ ಜನಪ್ರಿಯವಾಗುತ್ತಿದೆ ಎಂದು ಭಾವಿಸಿರಲಿಲ್ಲ. ಇದರ ಬೆಳವಣಿಗೆಯನ್ನು ರಾಜ್ಯದ ಪ್ರಮುಖ ಲೇಖಕರು ಮುನ್ನಡೆಸಿದ್ದಾರೆ. ಅವರ ಸಕಾಲಿಕ ಬರಹಗಳಿಂದ ಬಹುಬೇಗ ಜನಮನ್ನಣೆ ಗಳಿಸಲು ಸಾಧ್ಯವಾಯಿತು.
ಪ್ರತಿದಿನ ತಪ್ಪದೆ e-ಸುದ್ದಿಯಲ್ಲಿ ಬೆಳಿಗ್ಗೆ ಶರಣರ ವಚನಗಳ ವಿಶ್ಲೇಷಣೆ, ದಾಸರ ಹಾಡುಗಳು, ಕವಿತೆ, ಕಥೆ, ವ್ಯಕ್ತಿ ಪರಿಚಯ, ಪುಸ್ತಕ ಪರಿಚಯ, ಉತ್ತಮ ಸಂಘ ಸಂಸ್ಥೆ ಪರಿಚಯ, ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಮತ್ತು ಮಧ್ಯಾಹ್ನದಲ್ಲಿ ಸುದ್ದಿಗಳ ಪ್ರಕಟಣೆ ಮಾಡುತ್ತಿದ್ದೇವೆ.
ಆರಂಭದಲ್ಲಿ ಇದನ್ನು ರಾಯಚೂರು ಜಿಲ್ಲೆಗೆ ಸೀಮಿತಗೊಳಿಸಿಕೊಂಡಿದ್ದೆ. ಆದರೆ ಈಗ ಇದು ಬರೀ ರಾಯಚೂರು ಜಿಲ್ಲೆಗೆ ಮಾತ್ರ ಸಮೀತವಾಗಲಿಲ್ಲ. ಬದಲಾಗಿ ಕರ್ನಾಟಕದ ಮನೆ ಮಾತಾಗಿದೆ. ಬೆಂಗಳೂರಿನಿಂದ -ಬೀದರವರೆಗೆ, ರಾಯಚೂರಿನಿಂದ ಬೆಳಗಾವಿ ವರೆಗೆ ಎಲ್ಲಾ ಜಿಲ್ಲೆಗಳಲ್ಲಿ e-ಸುದ್ದಿ ಅಂತರಜಾಲ ಪತ್ರಿಕೆಯನ್ನು ಓದುಗರು ಓದುತ್ತಿದ್ದಾರೆ. ಈಗ ಗಡಿ ದಾಡಿ, ಸಮುದ್ರ ಹಾರಿ ಸಿಮೋಲಂಘನ ಮಾಡಿ ಜಗತ್ತಿನ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರು ಓದುತ್ತಿದ್ದಾರೆ. ಅವರ ಅಭಿಪ್ರಾಯಗಳು ನನಗೆ ಜೀವ ಚೈತನ್ಯ ನೀಡಿದೆ. ಹಾಗೆಯೇ ಪತ್ರಿಕೆಗೆ ಬರಿಯುವವರ ಸಂಖ್ಯೆ ಕೂಡ ದ್ವಿಗುಣ ಗೊಂಡಿದೆ.
e-ಸುದ್ದಿ ಗೆ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಓದುಗರು ಅಗ್ರಪಂಕ್ತಿಯಲ್ಲಿದ್ದಾರೆ. ಹಾಗೆಯೆ ಬರಹಗಾರರು ಕೂಡ.
ಬೆಳಗಾವಿ, ಬಾಗಲಕೋಟೆ, ಬೀದರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ದೊಡ್ಡಬಳ್ಳಾಪುರ, ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹೀಗೆ ಹಲವು ಜಿಲ್ಲೆಗಳಿಂದ ಲೇಖಕರು,ಲೇಖಕಿಯರು ಬರೆಯುತ್ತಿದ್ದಾರೆ.
ವಿಶೇಷವಾಗಿ e-ಸುದ್ದಿ ಗೆ ಮಹಿಳಾ ಬರಹಗಾರರು ಅಧಿಕವಾಗಿದ್ದು ಅವರು ಈ ಪ್ಲಾಟ್ ಫಾರ್ಮನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಅದಕ್ಕಾಗಿ ನಮ್ಮ e-ಸುದ್ದಿ ಗೆ ಬರೆಯುವ ಎಲ್ಲಾ ಲೇಖಕರಿಗೆ ಧೀರ್ಘದಂಡ ಪ್ರಣಾಮಗಳು.
ಎರಡು ವರ್ಷಗಳಿಂದ ಓದುಗರಿಂದ ಒಂದೇ ಒಂದು ರೂಪಾಯಿ ಪಡೆದಿಲ್ಲ. ಇದೊಂದು ತಪ್ಪಸ್ಸು ಎಂಬಂತೆ ನಡೆಸಿಕೊಂಡು ಬರಲಾಗಿದೆ. ನಮ್ಮ ಈ ಕೆಲಸ ನೋಡಿ ಅನೇಕರು ಹಣದ ಸಾಹಾಯ ಮಾಡುವುದಾಗಿ ನನ್ನೊಂದಿಗೆ ಚರ್ಚಿಸಿದ್ದಾರೆ. ಆದರೆ ಸುಮ್ಮ ಸುಮ್ಮನೆ ಹಣ ಪಡೆಯುವುದು ನನ್ನ ಜಾಯಮಾನಕ್ಕೆ ಒಗ್ಗದ್ದು.
ಹಾಗಂತ e-ಸುದ್ದಿಯನ್ನು ಉಚಿತವಾಗಿ ಪ್ರಕಟಿಸಲು ಸಾಧ್ಯ ವಾಗುತ್ತಿಲ್ಲ. ಇಂಟರ್ ನೆಟ್, ಕಂಪ್ಯೂಟರ್, ಡಿಜೈನ್ ಮಾಡಿಲೇಟರ್ ಎಲ್ಲದಕ್ಕೂ ಹಣಕೊಡಬೇಕು. ಅದಕ್ಕಾಗಿ e-ಸುದ್ದಿಗೆೆ ಓದುಗರು ಕೈ ಜೋಡಿಸುವ ಮೂಲಕ ಇದನ್ನು ಮತ್ತಷ್ಟು ಬೆಳೆಸಲು ಸಹಕಾರಿಸುವಿರಿ ಎಂದು ಭಾವಿಸುವೆ.
ಹೀಗೆ ಸಹಕರಿಸಿ
೧)ನಿಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಶುಭಾಶಯಕೊರುವುದು ಮಗುವಿನ ತೊಟ್ಟಿಲು ಕಾರ್ಯಕ್ರಮ, ಹುಟ್ಟುಹಬ್ಬ, ಮದುವೆ ಕಾರ್ಯಕ್ರಮ, ಮದುವೆ ವಾರ್ಷಿಕವಕ್ಕಾಗಿ ಶುಭಾಶಯ ಕೊರಬಹುದು.
೨) ನಿಮ್ಮ ಅಂಗಡಿ, ಕಚೇರಿಗಳ ಪ್ರಾರಂಭೋತ್ಸವಕ್ಕೆ ಪ್ರಚಾರ ಕೊಡುವುದು
೩)ಶಾಲಾ ಕಾಲೇಜುಗಳ ಅಡ್ಮಿನಿಸ್ಟ್ರೇಶನ್ ಗಾಗಿ ಪ್ರಚಾರ ಪಡೆಯಬಹುದು
೪) ವಿಶೇಷವಾಗಿ ಓದುಗರು ಪ್ರತಿದಿನ ಒಂದು ರೂಪಾಯಿ ಕೊಡಿ ಸಾಕು. ಪ್ರತಿದಿನ ಕನಿಷ್ಠ ೧೦ ಲೇಖನ, ಸುದ್ದಿಗಳನ್ನು ಓದುವ ಸೌಭಾಗ್ಯ ಕಲ್ಪಿಸುತ್ತೇವೆ ಮತ್ತು ಒಂದು ಉತ್ತಮ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುತ್ತೇವೆ
ಈ ಬಗ್ಗೆ ಯಾರಿಗೂ ಒತ್ತಾಯವಿಲ್ಲ. ಆಸಕ್ತರು ಮಾತ್ರ ಸ್ಪಂದಿಸಬಹುದು. ಪತ್ರಿಕೆಗೆ ಜಾಹಿರಾತು ನೀಡಿ , ನೀವು ಬೆಳೆಯಿರಿ. ಇದೊಂದು ಪ್ರಚಾರ ಯುಗ. ಪ್ರಚಾರದಲ್ಲಿ ಇರುವವರು ಮಾತ್ರ ಸದಾ ಜನ ಸಂಪರ್ಕದಲ್ಲಿರುತ್ತಾರೆ. ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಇಂದು ಬಹಳ ಅಗತ್ಯ
ತಮ್ಮ ಸಲಹೆ ಸೂಚನೆ ಅಗತ್ಯ. ಮುಕ್ತವಾಗಿ ಚರ್ಚಿಸಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೀರೇಶ ಸೌದ್ರಿ ಮಸ್ಕಿ
ಸಂಪಾದಕ, e-ಸುದ್ದಿ
9448805067