ಗಜಾನನ ಮನ್ನಿಕೇರಿ ಇವರಿಗೆ ” ಶಿಕ್ಷಣ ಸಿರಿ ” ಪ್ರಶಸ್ತಿ
e-ಸುದ್ದಿ ಬಾಗೋಜಿಕೊಪ್ಪ
ರಾಮದುರ್ಗ ತಾಲೂಕಿನ ಬಾಗೋಜಿಕೊಪ್ಪ ಶ್ರೀ ಮಠದ ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಧಾರವಾಡದ ಜಂಟಿ ನಿರ್ದೇಶಕರಾದ ಗಜಾನನ ಮನ್ನಿಕೇರಿ ಸಾಹೇಬರಿಗೆ ಶ್ರೀ ಮಠದ ವತಿಯಿಂದ ” ಶಿಕ್ಷಣ ಸಿರಿ ” ಪ್ರಶಸ್ತಿ ದೊರೆತಿದ್ದಕ್ಕೆ ಗೋಕಾಕ ತಾಲೂಕಾ ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷರು ಮತ್ತು ಕಾವ್ಯಕೂಟ ಕನ್ನಡ ಬಳಗದ ಸಂಸ್ಥಾಪಕರಾದ ಈಶ್ವರ ಮಮದಾಪೂರ ಅಭಿನಂದಿಸಿದ್ದಾರೆ . , ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಮತ್ತು ಶಿಸ್ತಿನಿಂದ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮನ್ನಿಕೇರಿಯವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ದಲ್ಲಿಯ ಅತ್ಯುತ್ತಮ ಸೇವೆಗೆ ರಾಷ್ಟ್ರಪತಿಗಳಿಂದ “ಬೆಳ್ಳಿಚುಕ್ಕಿ” ಪ್ರಶಸ್ತಿ ಸ್ವೀಕರಿಸಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ ಎಂದರು.
ಬಾಗೋಜಿಕೊಪ್ಪದ ಶಿವಯೋಗಿ ಹಿರೇಮಠ, ಬಿಜಗುಪ್ಪಿ ಸ್ವಾಮೀಜಿ , ರಾಯಚೂರು ಜಿಲ್ಲಾ ಅಂಕಲಿ ಮಠದ ಸ್ವಾಮೀಜಿ , ಚಲನ ಚಿತ್ರ ನಟರಾದ ದೊಡ್ಡಣ್ಣ , ಯದವಾಡ ಸಕ್ಕರೆ ಕಾರ್ಖಾನೆಯ ಮಲ್ಲಣ್ಣ, ಬಿ.ಡಿ. ಪಾಟೀಲ್, ವೈದ್ಯರಾದ ಡಾ.ಬಿ.ಬಿ.ಪಟಗುಂದಿ , ಡಾ.ಸುರನ್ನವರ , ಸಮಾಜ ಸೇವಕರಾದ ಈಶ್ವರ ಕತ್ತಿ, ಸೌಂದತ್ತಿ ರೇಣುಕಾ ಯಲ್ಲಮ್ಮ ಟ್ರಸ್ಟ್ ಕಮಿಟಿಯ ಬಸಯ್ಯ ಹಿರೇಮಠ ಎಲ್ಲರೂ ಸೇರಿ ಪ್ರಶಸ್ತಿ ನೀಡಿ ಸತ್ಕರಿಸಿದರು.