ನನ್ನ ಶಾಲೆ

ನನ್ನ ಶಾಲೆ

ನಾನು ಕಲಿತ
ಶಾಲೆ ಅಲ್ಲಿ
ನಾನು ಶಿಕ್ಷಕಿ
ಆಗ ಕಲಿತ
ಅ ಆ ಇ ಈ
ಬೋರ್ಡ್ ಮೇಲೆ
ನಾನೂ ಬರೆಯುತ್ತಿದ್ದೇನೆ
ಮಕ್ಕಳ ಪ್ರಾರ್ಥನೆ
ನಂತರ ಪಾಠ
ಗಾಂಧಿ ಬುದ್ಧ ಬಸವಣ್ಣ
ಹಂಪಿ ಗತ ವೈಭವ ಬೋಧೆ
ವರ್ಣಮಾಲೆ ಶೋಭೆ
ಮಗ್ಗಿ ಕಾಗುಣಿತ
ವಿಜ್ಞಾನ ಭೂಗೋಳ
ಮಧ್ಯಾಹ್ನ ಊಟದ ಘಂಟೆ
ಹೊರಗೆ ಬಿಸಿಯೂಟ
ಹಸಿದ ಮಕ್ಕಳ ದೌಡು
ಆಟ ಪಾಠ ಕಲಿಸುವ
ನನ್ನ ಶಾಲೆ
ಮಕ್ಕಳ ಭವಿಷ್ಯ
ಬುನಾದಿ ಅಡಿಪಾಯ
ಶೈಕ್ಷಣಿಕ ಕೇಂದ್ರ

ರೂಪಾ ಪಟ್ಟಣಶೆಟ್ಟಿ ರಾಮದುರ್ಗ

Don`t copy text!