ರೈತ
ಬಿಸಿಲ ಕಳೆದು ಹೊಲದೊಳೆದು
ಮಳೆ ಇಳೆಗೆ ಬರುವರೆಗೆ ಕಾಯ್ದು
ನೆಲ ನಮಿಸಿ, ಹೊಲ ಬಿತ್ತಿ
ನಿನ್ನಯ ಭಾರ ಹೊಲಕೆ ಎರೆದು
ಮಳೆ ಬಂದು ಬೆಳೆ ಚಿಗುರಿ
ನಗುಮೊಗದಿ ನೀ ಬರಲು
ಎತ್ತು ಮೇಯಿಸಿ, ಕಸ ಕಿತ್ತಿ
ಬರುತ್ತಿರೆ ಬಂಗಾರದ ಬೆಳೆ ಈ ಸಾಲು
ಸಿಂಪಡಿಸಿ ನಾಶಕ, ಗೊಬ್ಬರವು
ತರುವುದಕ
ಸಾಲವು ಬಂತು ಬ್ಯಾಂಕಿನಲಿ
ಅಬ್ಬರದ ಬೆಳೆಗೆ ಬೆಲೆ
ಸಿಗಲೇ ಇಲ್ಲ ಸಾಲವೊಂದೆ ನಿನಗೆ ಕೊನೆಗಾಲದಲಿ
ಬೆಳೆದ ಬಂಗಾರ ಕಳೆದೇವು ಗ್ರಹಚಾರ ನೆನೆದಿಲ್ಲ ಕ್ಷಣವಾದರೂ ನಿನ್ನನು
ಎಲ್ಲವ ಮರೆತು, ಬರುವರ್ಷ ಹೊಲಕೆ ನಡೆಯುತಾ ಈತ ಮರು ಹೊಂಟನು
-ಮೌನೇಶ ಬಾರಕೇರ