ಹೃದಯ
ವಿಶ್ವ ಹೃದಯ ದಿನದ ವಿಶೇಷ ಲೇಖನ
ಮನುಷ್ಯನ ಜೀವಂತಿಕೆಯನ್ನು ದೃಢ ಪಡಿಸುವ ಅಂಗ ಹೃದಯ. ಮನುಷ್ಯನ ದೇಹದಲ್ಲಿ ಹೃದಯದ ಮಹತ್ವ ಬಹಳವಿದೆ, ೨೦ನೇ ಶತಮಾನದ ಈ ಸಮಯದಲ್ಲಿ ಒತ್ತಡ ಮತ್ತು ಗಡಿಬಿಡಿಯ ಜೀವನ ಶೈಲಿಯ ಕಾರಣದಿಂದ ವರ್ಷಕ್ಕೆ ೧೭ ದಶ ಲಕ್ಷ ಜನರು ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.
೧೯೭೦ರಲ್ಲಿ ಆರಂಭವಾದ ವಿಶ್ವ ಹೃದಯ ಒಕ್ಕೂಟದ ೧೯೯೭-೯೯ರವರೆಗೆ ಅಧ್ಯಕ್ಷರಾಗಿದ್ದ ಆಂಟೋನಿ ಬೇಯ್ಸ್ ಡಿ ಲೂನಾರವರ ವಿಚಾರಧಾರೆಯಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಿಂದ ೨೦೦೦ ಇಸವಿಯಿಂದ ವಿಶ್ವ ಹೃದಯ ದಿನವನ್ನು ಸೆಪ್ಟಂಬರ್ ತಿಂಗಳ ಕೊನೆ ಆದಿತ್ಯವಾರದಂದು ಆಚರಿಸುತ್ತಿದ್ದರು, ನಂತರ ೨೦೧೧ನೇ ಇಸವಿಯ ನಂತರ ಸೆಪ್ಟಂಬರ್ ೨೯ರಂದು ಆಚರಿಸಲಾರಂಭಿಸಿದರು, ವಿಶ್ವದಲ್ಲಿ ಹೆಚ್ಚುತ್ತಿರುವ ಹೃದಯಾಘಾತದಿಂದ ಆಗುತ್ತಿರುವ ಸಾವು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಬಗೆಗೆ ತಿಳಿವಳಿಕೆ ನೀಡಿ, ಆರೋಗ್ಯಯುತವಾಗಿರುವ ಮಾರ್ಗಗಳನ್ನು ತಿಳಿಸುವುದೇ ಈ ದಿನ ಆಚರಣೆಯ ಉದ್ದೇಶ.
ಆಂಗ್ಲದ ಒಂದು ಗಾದೆಯಂತೆ “ಪ್ರಿವೆನ್ಷನ್ ಇಸ ಬೆಟರ್ ದ್ಯಾನ್ ಕ್ಯೂರ್” ಎಂದರೆ ರೋಗವನ್ನು ಚಿಕಿತ್ಸೆಯ ಮೂಲಕ ಸರಿ ಪಡಿಸಿಕೊ:ಳ್ಳುವುದರ ಬದಲು ರೋಗವೇ ಬರದಂತೆ ನಮ್ಮ ಆರೋಗ್ಯವನ್ನು ಕಾಯ್ದು ಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಯಾವುದಾದರೂ ಕಾಯಿಲೆಯ ಭಯವಂತೂ ಇದ್ದೇ ಇರುತ್ತದೆ. ಅದರಲ್ಲಿ ತಿನ್ನುವ ಜಂಕ್ ಫುಡ್ ಮತ್ತು ವಾಯು ಮಾಲಿನ್ಯದ ಪ್ರಭಾವದಿಂದ ಹೃದಯ ರೋಗವು ಬರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ದಿನವೂ ನಿಯಮಿತವಾದ ಆರೋಗ್ಯಕರವಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡುವುದು ಬಹಳ ಅವಶ್ಯಕ. ಜಂಕ್ ಫುಡ್‌ಗಳು ಹೃದಯಕ್ಕೆ ಹಾನಿಕಾರಕ ಅದರಲ್ಲಿ ಕರಿದ ಪದಾರ್ಥಗಳು ಮತ್ತು ಬೇಕರಿ ಪದಾರ್ಥಗಳು ದೇಹದಲ್ಲಿ ಹೆಚ್ಚು ಪ್ರಮಾಣದ ಕೊಬ್ಬನ್ನು ಉತ್ಪತ್ತಿ ಮಾಡುತ್ತವೆ. ಇಂದಿನ ಆಧುನಿಕ ಯುಗದಲ್ಲಿ ಮೈ ಬಗ್ಗಿಸಿ ಮಾಡುವ ಕೆಲಸಗಳಿಂತ ಕುಳಿತಲ್ಲೇ ಕೆಲಸ ಮಾಡುವ ಕೆಲಸಗಳೇ ಹೆಚ್ಚಿರುವದರಿಂದ ಮನೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯ ಕಾರಣದಿಂದ ದೇಹಕ್ಕೆ ವ್ಯಾಯಾಮವು ಕಡಿಮೆಯಾಗುವದಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ, ವೈದ್ಯರು ಮತ್ತು ವಿಜ್ಞಾನಿಗಳ ಅಧ್ಯಯನದ ಆಧಾರದ ಮೇಲೆ ಅವರು ಹೇಳಿದಂತಹ ಆರೋಗ್ಯಯುತ ಆಹಾರವನ್ನು ಹಣ್ಣು ತರಕಾರಿಗಳನ್ನು ಸೇವಿಸಿದಾಗ ನಮ್ಮ ಹೃದಯದ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ.
ಇಂತಹ ಜಾಗೃತಿಯನ್ನು ನಾವು ಮನೆ ಮನೆಗೆ ತಲುಪಿಸಬೇಕೆಂಬ ಉದ್ದೇಶದಿಂದ ಆರಂಭವಾದ ದಿನಾಚರಣೆ ಇಂದಿನ ಪರಿಸ್ಥಿತಿಯಲ್ಲಿ ಡಿಜಿಟಲ್ ಮಾಧ್ಯಮದಿಂದ ಮಾತ್ರ ಪ್ರಚಾರ ಮಾಡುವ ಪರಿಸ್ಥಿತಿ ಇರುವ ಕಾರಣ ಸಮಾರಂಭಗಳನ್ನು ಮಾಡುವ ಬದಲು ಗೂಗಲ್ ಮೀಟ್ , ಜೂಮ್ ಮೀಟ್‌ಗಳ ಮೂಲಕ ಆಚರಿಸಲಾಗುತ್ತಿದೆ. ಕೋರೋನಾ ಕಾಯಿಲೆಯು ಹೃದಯರೋಗಿಗಳಿಗೆ ಮತ್ತು ಸಕ್ಕರೆ ಕಾಯಿಲೆ ಇರುವ ಜನರಿಗೆ ಬಹುಬೇಗ ಹಾನಿ ಮಾಡುವ ಕಾರಣದಿಂದ ಸುರಕ್ಷಿತವಾಗಿರುವುದು ಬಹಳ ಮುಖ್ಯವಾಗಿದೆ. ಹೃದಯ ಸಂಬಂಧಿ ರೋಗಗಳು ಸಾಮಾನ್ಯವಾಗಿ ಡಯಾಬಿಟೀಸ್ ರೋಗಿಗಳಲ್ಲಿ ಹೆಚ್ಚಾಗಿ ಕಾಣಬಹುದು ಏಕೆಂದರೆ ಮಧುಮೇಹದಿಂದ ಮನುಷ್ಯ ಹೃದಯ, ಕಣ್ಣು ಮತ್ತು ಕಿಡ್ನಿ ಬಹುಬೇಗ ಸೋಂಕಿಗೆ ಒಳಗಾಗಿ ಅವುಗಳಿಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳ ತೊಡಗುತ್ತವೆ, ಇಂದಿನ ಪರಿಸ್ಥಿತಿಯಲ್ಲಿ ಕೋರೋನಾ ಕಾಯಿಲೆಯ ಜನರಿಗೆ ಮಾತ್ರ ಹೆಚ್ಚಿನ ಚಿಕಿತ್ಸೆ ದೊರೆಯುತ್ತಿದ್ದು ಬೇರೆಲ್ಲಾ ಕಾಯಿಲೆಗಳ ರೋಗಿಗಳು ಚಿಕಿತ್ಸೆಯ ಕೊರತೆಯಿಂದ ಸಾವನ್ನಪ್ಪುತ್ತಿರುವ ಸಲುವಾಗಿ ನಮ್ಮ ಹೃದಯದ ರಕ್ಷಣೆಯ ಭಾರ ನಮ್ಮ ಮೇಲೆಯೇ ಇರುವದರಿಂದ ಆರೋಗ್ಯಯುತ ಆಹಾರ, ಆರೋಗ್ಯ ಪೂರ್ಣ ವಾತಾವರಣವನ್ನು ಕಲ್ಪಿಸಿಕೊಂಡು ವ್ಯಾಯಾಮವನ್ನು ನಿಯಮಿತವಾಗಿ ಮಾಡಿಕೊಂಡು ನಮ್ಮ ಅತ್ಯಮೂಲ್ಯವಾದ ಹೃದಯವನ್ನು ಕಾಪಾಡಿಕೊಳ್ಳೋಣ. ತಾಂತ್ರಿಕತೆ ಮತ್ತು ವೈದ್ಯಕೀಯ ಅವಿಷ್ಕಾರಗಳಿಂದ ಹೃದಯವನ್ನು ಕಸಿ ಮಾಡುವ ಕಾಲವೂ ಬಂದಿದ್ದರೂ ಕೂಡ ದೇವರು ಕೊಟ್ಟ ಆ ಹೃದಯದ ಆರೋಗ್ಯ ಬಹು ಮುಖ್ಯ ಎಂಬ ವಿಚಾರವನ್ನು ನಾವೂ ತಳಿಯೋಣ ನಮ್ಮವರಿಗೂ ತಿಳಿಸೋಣ
–ಮಾಧುರಿ, ಬೆಂಗಳೂರು