ಹೆಸರು ಸೂಚಿಸಿ, ಬಹುಮಾನ ಗೆಲ್ಲಿ

ಹೆಸರು ಸೂಚಿಸಿ, ಬಹುಮಾನ ಗೆಲ್ಲಿ

ಆತ್ಮೀಯ ಓದುಗರಿಗೆಲ್ಲ  ವೀರೇಶ ಸೌದ್ರಿ ಮಾಡುವ ನಮಸ್ಕಾರಗಳು 

ದೃಶ್ಯ ಮಾಧ್ಯಮವಾದ ಸಿನಿಮಾವನ್ನು  ಥೇಟರ್ ಗೆ ಹೋಗಿ ನೋಡುವುದು ಕ್ಷೀಣಿಸುತ್ತಿದೆ. ಸಿನಿಮಾ ಥೇಟರ್ ಜಾಗದಲ್ಲಿ ನಿಮ್ಮ ಮನೆಯಲ್ಲಿರುವ T.V. ಪೆಟ್ಟಿಗೆ ಬಂದು ಕುಳಿತಿದೆ. ಮನೆ ಮಂದಿಯಲ್ಲ ಸಿನಿಮಾ ಮಾಡುವುದನ್ನು ಬಿಟ್ಟು ಎಷ್ಟೊ ವರ್ಷಗಳಾಯಿತು.
ಈಗ T.V. ಕೂಡ ಸ್ವಲ್ಪ ಮಟ್ಟಿಗೆ ಹಿನ್ನಲೆಗೆ ಸರಿಯುತ್ತಿದೆ. ಕಾರಣ ನಿಮ್ಮ ಅಂಗೈಯಲ್ಲಿರುವ ಮೊಬೈಲ್.
ಮೊಬೈಲ್ ಈಗ ಸಂಭಾಷಣೆ ಮಾಡಲು ಇರುವ ಸಾಧನವಾಗಿ ಉಳಿದಿಲ್ಲ. ಇದೊಂದು ಮಾಯಜಾಲದ ಯಂತ್ರವಾಗಿದೆ. ಮಕ್ಕಳಿಂದ ಹಿಡಿದು ಮುದಕರ ವರೆಗೆ ಮನರಂಜನೆ, ಸಿನಿಮಾ, ಸುದ್ದಿಗಳು, ಕತೆಗಳು, ಕ್ರೀಡೆ ಎಲ್ಲಾ ಕ್ಷೇತ್ರದ ಎನ್ನೆಲ್ಲ ಬೇಕು ಅವುಗಳನ್ನು ನೋಡುವ ಸೌಭಾಗ್ಯ ಬಂದು ಬಿಟ್ಟಿದೆ.
ಅದರಲ್ಲೂ YouTube ಚಾನಲ್ ಅತ್ಯಂತ ಜನಪ್ರೀಯ ಮಾದ್ಯಮವಾಗಿ ಹೊರಹೊಮ್ಮಿದೆ.
e-ಸುದ್ದಿ ಎರಡು ವರ್ಷದ ಸಾಧನೆಯ ಜತೆಗೆ ಮತ್ತೊಂದು ಹೆಜ್ಜೆ ಇಡಲು ಮುಂದಾಗಿದೆ. YouTube ಚಾಲನ್ ಪ್ರಾರಂಭಿಸಲು ನಿರ್ಧರಿಸಿದೆ. ಅದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮ ಮುಂದೆ ಬಂದಿರುವೆ.
ಹೊಸ ಯುಟೂಬ್ ಚಾಲನ್ ಗೆ ಓದುಗರಾದ ತಾವುಗಳು ಹೊಸ ಹೆಸರು ಸೂಚಿಸಿ ಆಕರ್ಷಕ ಬಹುಮಾನ ಪಡೆಯಿರಿ. ರಾತ್ರಿ 10 ಗಂಟೆಯ ಒಳಗೆ ನೀವು ಹೆಸರನ್ನು ವಾಟ್ಸ್ ಆಪ್ ನಂಗೆ ಸೂಚಿಸಿ. ಆಯ್ಕೆಯಾದವರ ಹೆಸರು, ಭಾವಚಿತ್ರ ಬಹುಮಾನ ನಾಳೆ ಪ್ರಕಟಿಸಲಾಗುವುದು.

 

ವೀರೇಶ ಸೌದ್ರಿ ಮಸ್ಕಿ

Don`t copy text!