ದೇವಿ ಪುರಾಣ ಮಂಗಲ ಹಾಗೂ ದೇವಿಯ ರಥೋತ್ಸವ
e-ಸುದ್ದಿ ಮಸ್ಕಿ
ದೇವಿ ಪುರಾಣ ಮಂಗಲ ಹಾಗೂ ದೇವಿಯ ರಥೋತ್ಸವ ಭಾನುವಾರ ವೈಭವದಿಂದ ನಡೆಯಿತು. ನೂರಾರು ಮಹಿಳೆಯರು ರಥ ಎಳೆಯುವ ಮೂಲಕ ಭ್ರಮರಾಂಬಾ ದೇವಿಯ ಕೃಪೆಗೆ ಪಾತ್ರರಾದರು.
ಸಂಜೆ 5 ಗಂಟೆಗೆ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು ರಥದ ಸುತ್ತ ಐದು ಬಾರಿ ಸುತ್ತು ಹಾಕಿದ ನಂತರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನೂರಾರು ಭಕ್ತರ ಜಯಘೋಷಗಳ ನಡುವೆ ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಭಕ್ತರು ಜಯಘೋಷ ಹಾಕಿ ರಥಕ್ಕೆ ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಮಸ್ಕಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ರಥ ಮಿಣಿ ಹಿಡಿದು ರಥ ಎಳೆಯತೊಡಗಿದರು. ಹೆದ್ದಾರಿ ಪಕ್ಕದ ಪಾದಗಟ್ಟೆವರೆಗೆ ರಥ ಎಳೆದು ವಾಪಾಸು ಭ್ರಮರಾಂಬಾ ದೇವಸ್ಥಾನಕ್ಕೆ ತರಲಾಯಿತು.
ಮಹಿಳೆಯರು ರಥ ಎಳೆಯುತ್ತಿದ್ದರೆ ಪುರುಷರು ರಥಕ್ಕೆ ಉತ್ತುತ್ತಿ ಏಸೆದು ಭಕ್ತಿ ಸಮರ್ಪಿಸಿದರು. ವಿವಿಧ ಜಾನಪದ ತಂಡಗಳು ಪಾಲ್ಗೊಂಡಿದ್ದವು.
ಗಚ್ಚಿನಮಠದ ವರ ರುದ್ರಮುನಿ ಸ್ವಾಮೀಜಿ,
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.