ನೀ ದಿನಾ ಸಾಯಕ ಹತ್ತಿ

ನೀ ದಿನಾ ಸಾಯಕ ಹತ್ತಿ

(ಫೆಬ್ಲು ನೆರುಡ್ ಅವರ ಇಂಗ್ಲಿಷ್ ಕವಿತೆಯ ಕನ್ನಡ ಅನುವಾದ
ಉತ್ತರ ಕರ್ನಾಟಕದ ಭಾಷಾ ಸೊಗಡಿನಲ್ಲಿ)

ನೀನು ದಿನಾ ತಟತಟಕ ಸಾಯ್ತಿ
ನೀ ತಿರಿಗ್ಯಾಡಲಿಲ್ಲಾಂದ್ರ
ನೀ ಓದ್ಲೀಲ್ಲಾಂದ್ರ
ನಿನ್ನ ಜೀವನದಾಗ ಸುತ್ತ ಮುತ್ತಲ್ ನಡಿ ಗದ್ದಲ ಕೇಳಿಲ್ಲಾಂದ್ರ
ನಿನ್ನ ಬಗ್ಗೆ ನೇ ನಿನಗ ಕಿಮ್ಮತ್ತ ಇಲ್ಲಾಂದ್ರ

ನೀ ದಿನಾ ಜರಾಜರಾ ಸಾಯ್ತಿ
ನೀ ಯಾವಾಗ ನಿನ್ನ ಅಭಿಮಾನ
ನೀನ ಕೊಲ್ತಿ
ನೀ ಯಾವಾಗ ಸೊಕ್ಕಲೆ ಮೆರಿತಿ

ನೀ ಸಣ್ಣಗ ಸಾಯಾಕ ಶುರು ಆಕ್ಕಿ
ನೀ ಚಟಕ್ಕ ದಾಸಾದೆಂದ್ರ
ನಡದ್ದ ದಾರ್ಯಾಗ ಹೊಳ್ಳಿ ಹೊಳ್ಳಿ
ನಡಿಯಾಕ್ ಹತ್ತಿದೆಂದ್ರ
ದಿನಾ… ಮಾಡಿದ್ದ ಮಾಡಾಕ ಹತ್ರ
ಹಳಿ ಅಂಗಿ ಬಿಟ್ಟು ಬಣ್ಣಬಣ್ಣದ ಅಂಗಿ
ಹಾಕಲಿಲ್ಲಾಂದ್ರ ಅಥವಾ
ಹೊಸಬರನ್ನ ಮಾತಾಡಸುವ
ಉಸಾಬರಿಗೆ ಹೋಗಲಿಲ್ಲಾಂದ್ರ

ನೀ ಹಗರಕ ಸಾಯಾಕಹತ್ತಿದಿ
ನಿನ್ನ ನೆಮ್ಮದಿ ಕೆಡಸುವಂತ
ವಿಚಾರಕ್ಕ ನೀ ಉತ್ಸಾಹ
ಕಳಕೊಂಡಿ ಅಂದ್ರ
ನಿನ್ನ ಎದಿಬಡತ ಹೆಚ್ಚಮಾಡಿ
ನಿನ್ನ ಕಣ್ಣಾಗ ಹೊಳಪ ತರುವಂತ
ಭಾವನೆಗಳಿಗಿ ನೀ ಸ್ಪಂದಿಸಲಿಲ್ಲಾಂದ್ರ

ನೀನಗ ಗೊತ್ತಾಗಲಾರದಂಗ ಸಾಯಾಕ ಹತ್ತಿ
ಖುಷಿ ಕೊಡಲಾರದ ಕೆಲಸಾ ಬಗ್ಸೀಗೀ
ಜೋತ ಬಿದ್ದೆಂದ್ರ
ಗಬಕ್ಕ ಅಂತ ಬಂದು ಸವಾಲುಗಳನ್ನು
ಎದುರಿಸು ಛಾತಿ ಇಲ್ಲದ ಅಂಜಿದೆಂದ್ರ
ಕನಸ ಕಾಣಲಿಲ್ಲಂದ್ರ
ನಿನ್ನ ಬಗ್ಗೆ ನಿನಗ ಅರುವು ಇಲ್ಲ ಅಂದ್ರ
ಜೀವನದಾಗ ಒಮ್ಮೆರಾ ದೊಡ್ಡವರ
ಮಾತಿಗಿ ಬೆಲಿ ಕೊಡಲಾರಂದಗ ನಡಿಲಿಲ್ಲಾ ಅಂದ್ರ

ಫೆಬ್ಲೂ ನರುದ್
ಕನ್ನಡ ಅನುವಾದ:
– ಡಾ.ನಿರ್ಮಲಬಟ್ಟಲ

Don`t copy text!