ಮಹಾ ಶಕ್ತಿ ಪೀಠ ಕೋಲ್ಹಾಪುರದ ಮಹಾಲಕ್ಷ್ಮಿ…..
ನಮ್ಮಭಾರತ ವಿಶಿಷ್ಟ ದೇವಾಲಯಗಳ ಬೀಡು. ಅದರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ಕೂಡ ಒಂದು. ಇದು ಪುರಾತನ. ಸನಾತನ ಶಕ್ತಿ ಪೀಠ.ವಿಷ್ಣುವಿನ ಪತ್ನಿ ಮಹಾಲಕ್ಷ್ಮಿಯ ಶಾಶ್ವತ ನೆಲೆ. ಭಾರತದ 108ಶಕ್ತಿ ಪೀಠಗಳಲ್ಲಿ ಒಂದು.
ದಕ್ಷ ಬ್ರಹ್ಮನ ಯಜ್ಞದ ಸಮಯದಲ್ಲಿ ಸತಿಯ ದೇಹವನ್ನುಮಹಾ ವಿಷ್ಣುವು 108ಭಾಗ ಮಾಡಿದಾಗ ನಯನ ಬಿದ್ದ ಸ್ಥಳವೇ ಈ ಕೋಲ್ಹಾ ಪುರದ ಮಹಾಲಕ್ಷ್ಮಿ.ಈ ಅದ್ಭುತ ಆಲಯವು ಪಂಚ ಗಂಗಾ ನದಿ ತಟದಲ್ಲಿದೆ. ಭಾರತದಲ್ಲಿ ಐಶ್ವರ್ಯ. ಸಂಪತ್ತಿಗಾಗಿ ಪೂಜಿಸುವ ದೇವತೆ.ಗಡಿಭಾಗದಲ್ಲಿರುವ ಈ ಪಟ್ಟಣಕ್ಕೆ ತಲುಪಲು ಸಾಕಷ್ಟು ವ್ಯವಸ್ಥೆಯಿದೆ. ಲಕ್ಷಾಂತರ ಭಕ್ತರು ಈ ಅಂಬಾಭವಾನಿಗೆ ಭೇಟಿ ನೀಡುತ್ತಾರೆ.
ಈ ದೇವಾಲಯ 2ನೇ ಶತಮಾನದಾಗಿದ್ದು ಚಾಲುಕ್ಯ ವಂಶದ ಕರ್ಣದೇವರಾಜರಿಂದ ನಿರ್ಮಿಸಲ್ಪಟ್ಟಿದೆ. ದಿನವೂ ಮುಂಜಾನೆಯ ಸೂರ್ಯ ಕಿರಣ ವು ದೇವಿಯ ಮೂರ್ತಿ ಸ್ಪರ್ಶಿಸುವಂತೆ ಕಟ್ಟಿದ್ದಾರೆ. ನವರಾತ್ರಿ ಯಂದು ಅಸoಖ್ಯಾತ ಭಕ್ತರು ಬರುತ್ತಾರೆ. ಈ ಸಮಯದಲ್ಲಿ ದೇವಸ್ಥಾನ ಅಲಂಕೃತಗೊಂಡು ಸಂಗೀತಮಯವಾಗಿರುತ್ತದೆ.ಪುರಾಣಗಳ ಕೋಲ್ಹಾಸೂರ ಎಂಬ ರಾ ಕ್ಷಸನನ್ನು ಸಂಹರಿಸಿ ಇಲ್ಲಿ ನೆಲೆಗೊಂಡಳು ಎನ್ನುತ್ತಾರೆ.ಪ್ರಳಯದ ಕಾಲದಲ್ಲಿ ತಾಯಿ ಕೋಲ್ಹಪುರವನ್ನು ಕೈ ಯಿಂದ ಎತ್ತಿ ಕಾಪಾಡಿದ್ದಳಂತೆ. ಆದ್ದರಿಂದ ಈ ಕ್ಷೇತ್ರವನ್ನು ಕರವೀರ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ.ಕಾಶಿಗೆ ಸಮನಾದ ಕ್ಷೇತ್ರ.
ದೇವಸ್ಥಾನದಲ್ಲಿ ಮೂರ್ತಿಯ ಹಿಂದೆ ಕಿಟಕಿಯಿದ್ದು ಇದರಿಂದ ಮೂರು ದಿನ ಸೂರ್ಯಸ್ತದ ಕಿರಣ ಬಿದ್ದು ವಿಭಿನ್ನ ಶೋಭೆ ತರುತ್ತೆ.ದೇವಿಯ ನಾಲ್ಕು ಕೈಗಳಲ್ಲಿ ನಿಂಬೆಹಣ್ಣು. ಕಟಕ ವೆಂಬ ಆಯುಧ. ಹೂವು. ಬಟ್ಟಲು ಇದ್ದು ಇವು ಪ್ರತ್ಯೇಕ ಧರ್ಮ ಸೂಚಿಸುತ್ತೆ.ಈ ಕ್ಷೇತ್ರ ವನ್ನು ವಿಮುಕ್ತ ಕ್ಷೇತ್ರ ಎಂದು ಕೂಡ ಕರೆಯಲಾಗುತ್ತೆ.
ಇಲ್ಲಿ ಕಿರಣೋತ್ಸವ ಕೂಡ ಆಚರಿಸುತ್ತಾರೆ.
ದಿನಕ್ಕೆ 5ಬಾರಿ ಪೂಜೆ ನಡೆಯುತ್ತದೆ. ಮಧ್ಯಾನ್ಹದಲ್ಲಿ ಪೂಜಿಸುವ ಏಕೈಕ ದೇವಿ.ದೇವಾಲಯದ ಮುಖ್ಯ ದ್ವಾರ ಪಶ್ಚಿಮದಲ್ಲಿದೆ.ಎದುರಿಗೆ ಮರದ ಕಂಬಗಳ ಗರುಡಮಂಟಪವಿದೆ.ವಿಶಾಲಪ್ರಾಂಗಣ ಮಂಗಳ್ವಾರ್. ಶುಕ್ರವಾರ ವಿಶೇಷ ಪೂಜೆ. ಕಲ್ಲಿನ ಮಂಟಪದಲ್ಲಿ ಗಣೇಶನಿದ್ದಾನೆ.
ಪಶ್ಚಿಮಾಭಿ ಮುಖವಾಗಿ ಕುಳಿತು ದರ್ಶನ ನೀಡುವ ಅಮ್ಮಗರ್ಭ ಗುಡಿಯಲ್ಲಿ ಆರಡಿ ಎತ್ತರದ ವೇದಿಕೆ, ವೇದಿಕೆಯಲ್ಲಿ ಎರಡಡಿ ಪೀಠ. ಪೀಠದ ಮೇಲೆ ಮೂರಡಿಕಪ್ಪು ಶಿಲೆಯ ಎತ್ತರದ ಅಮ್ಮನ ಮೂರ್ತಿ ತುಂಬಾ ಸುಂದರವಾಗಿದೆ. ಮೂರ್ತಿ ಸುಮಾರು 5 ರಿಂದ 6 ಸಾವಿರದ ಪುರಾತನ ಮೂರ್ತಿ ಎನ್ನಲಾಗುತ್ತದೆ. ಸುಮಾರು 40ಕಿಲೋ ತೂಗುವ ಈ ಮೂರ್ತಿಗೆ ಹುಣ್ಣಿಮೆಯoದು ವಿಶೇಷ ಪೂಜೆ. ಇಂಥ ದಿವ್ಯ ದೇವಾಲಯ ಈ ಮಹಾಲಕ್ಷ್ಮಿ ದೇವಾಲಯ. ಇದು ಕೋಲ್ಹಾ ಪುರದ ಹೃದಯ ಭಾಗದಲ್ಲಿದೆ.
ಪುರಾಣಗಳ ಪ್ರಕಾರ ಬೃಗ ಮಹರ್ಷಿ ವಿಷ್ಣುವಿನ ಎದೆಯ ಭಾಗಕ್ಕೆ ಕಾಲಿಟ್ಟು ಅಪಮಾನಿ ಸಿದಾಗ ಲಕ್ಷ್ಮಿಗೆ ಸಿಟ್ಟು ಬಂದು ಇಲ್ಲಿ ನೆಲೆಸಿದಳೆoದು ಪ್ರತೀತಿ.
ಸುಂದರವಾಗಿ ಅಲಂಕ್ರತಗೊಂಡ ಈ ದೇವಿ ಕಿರೀಟದಲ್ಲಿ ಶೇಷನಾಗವಿದೆ. ನವರಾತ್ರಿಯಿಂದು ವಿವಿಧ ಅಲಂಕಾರದಲ್ಲಿ ಪೂಜಿಸುತ್ತಾರೆ. ದೇವಿಗೆ ಸ್ವರ್ಣ ಪಲಕ್ಕಿ ಇದೆ. ಈ ಸಿಂಹವಾಹಿನಿಯ ಆಶೀರ್ವಾದ ಸರ್ವರಿಗೂ ದೊರಕಲಿ ಎಂದು ಆಶಿಸುತ್ತೇನೆ.
✍️ಶ್ರೀಮತಿ. ವಿದ್ಯಾ. ಹುಂಡೇಕರ