• ಬಾರಯ್ಯ ಬಸವಾ

ಮರೆತಿದೇ ಜಗವು ನಿಮ್ಮಯ ತತ್ವವಾ
ಮರುಕಳಿಸಲು ಬಾರಯ್ಯ ಬಸವಾ

ತಿನ್ನುತಿರುವೆವು ಸತ್ವವಿಲ್ಲದ ಅನ್ನವ
ಓದುತ್ತಿರುವೆವು ಗಂಧವಿಲ್ಲದ ಪಠ್ಯವ

ಅರಿಯದೇ ಅರಿತೇವು ಎಂಬ
ಭ್ರಮೆಯಲ್ಲಿ
ಬದುಕುತಿಹೆವು  ಮೌಢ್ಯಯುತ ಸಮಾಜದಲ್ಲಿ

ಸಾರ್ಥಕತೆಯ ಸಾರವ ಮರೆತು
ಸ್ವಾರ್ಥಿಯಾಗಿಹೇವು ನಾವು ನಮ್ಮವರು ಎಂಬುದನು ಮರೆತು

ಮುಸುಕಿದೆ ಅಂಧಕಾರ
ಮರೆತು ಹೋಗಿದೆ ಮಮಕಾರ

ಅರ್ಥವಿಲ್ಲದ ಆಚರಣೆಗೆ ಮುಕ್ತಿ ಇನೇಲ್ಲಿ
ಬಡೆದಾಡುತ್ತಿರುವರು ಜಾತಿ, ಧರ್ಮದ ಹೆಸರಿಲ್ಲಿ

ನಡೆಯುತ್ತಿವೇ ಯಜ್ಞ,ಯಾಗ,ಹವನ
ನರಕ ಅನುಭವಿಸುತ್ತಿರುವರು ಬಡ ಜನ

ಮುಖವಾಡದ ಜೀವಕ್ಕೆ ಗೌರವ, ಸನ್ಮಾನ.
ಮಾಡುತ್ತಿಹರು ಸತ್ಯಕ್ಕೆ ಅವಮಾನ

ಭ್ರಷ್ಟರ ಕೈಯಲ್ಲಿದೆ ಖಜಾನೆ
ಭ್ರಷ್ಟಾಚಾರದಲ್ಲಿ ಮೈಮರೆತಿದ್ದೆ ಮೇಲ್ಮೆನೆ

ನಡೆಯತ್ತಿದೆ ನಿರಂತರ ಶೋಷಣೆ
ಮರೆತುಹೋಗಿದೆ ಏಕತೆಯ ಭಾವನೆ.

ಬಾರಯ್ಯ ಬಸವಾ ಬಾರಯ್ಯ…!
21 ರ ಈ ಕಾಲಕ್ಕೆ 12 ರ ಹೊಳಪು ತಾರಯ್ಯ…..!

✍️.ತೇಜಶ್ವಿನಿ ಶಿ ಜಿಡ್ಡಿ
8431048543
ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಲಿಂಗ ನಗರ,ಗದಗ

Don`t copy text!