ನವ ವರುಷ ನವ ಹರುಷ
ನವ ವರುಷದಿ ನವ ಹರುಷದಿ
ನವೋಲ್ಲಾಸ ಮೂಡಿಸುತ ||
ನವ ಬಾಳಿಗೆ ನವ ಹೊಳಿಗೆ
ಪ್ರೀತಿಯಿಂದ ಉಣಿಸುತ್ತ||
ಸಾಗೋಣ ಸಮರಸದಿ
ಸವಿ ಜೇಣ ಹರಿಸುತ್ತ||
ಕೂಡಿ ನಗುತ ಬಾಳೊಣ
ಸಂಬಂಧಗಳ ಬೆಸೆಯುತ್ತ||
ಭೂತಾಯಿ ಬಿಸಿಲ ಬೇಗೆ ತಣಿಯುತ್ತ
ಹಸಿರು ಹೊದ್ದು ಮೆರೆಯುತ್ತ
ರಂಗು ರಂಗಿನ ಕನಸು ಕಟ್ಟಿ
ಬಣ್ಣದೋಕುಳಿಯಲ್ಲಿ ಮೀಯುತ್ತ||
ಬೇವು ಬೆಲ್ಲ ಸವಿದುಂಡು
ಅರಿವಿನೋಜ ಹೊಂದುತ್ತ||
ಬವಣೆ ನೀಗಿ ಭವಸಾಗರದಿ
ಬಂಧನಗಳ ಕಳಚುತ್ತ ||
ಸುಗ್ಗಿಯಾ ಹುಗ್ಗಿ ಸವಿದು
ರೈತರನ್ನು ಭಕ್ತಿಯಿಂದ ನೆನೆಯುತ್ತ||
ಒಲವ ಸೂಸಿ ಜಗವ ಜಯಿಸಿ
ಚಂದ್ರಮಾನ ಯುಗಾದಿಯ ಆಚರಿಸುತ್ತ
ಸಾಗೋಣ ಏಳಿಗೆಯತ್ತ //
–ಸವಿತಾ ಮಾಟೂರ. ಇಲಕಲ್ಲ.