ದಿವ್ಯ ತೇಜ
ತನುವ ತೊಂಟವ ಮಾಡಿ
ಮನವ ಗುದ್ದಲಿಯವ ಮಾಡಿ
ಮಾಗಡಿಯ ವೀರಾಪುರ
ಹೊನ್ನೆಗೌಡ ಗಂಗಮ್ಮರ
ಮುದ್ದಿನ ಕುವರ ಮೂರ್ಖರ
ಮನವನು ಹಸನುಗೊಳಿಸಲು
ಜನಿಪನಿಂದು
ಹತ್ತೊಂಬತ್ತನೂರಾ ಏಳು
ಮರೆಯದ ಪುಣ್ಯ ದಿನವದು
ಸಿದ್ಧಗಂಗಾ ಉದ್ಧಾನ ಶ್ರೀಗಳ
ಒಲುಮೆಗೆ ಪಾತ್ರ
ಭೂಮಂಡಲವು ಕೈಲಾಸ
ವಾಗುವುದೆಂಬ ಅಭಯವಿತ್ತ
ಸಿದ್ಧಗಂಗೆಯ ಕಾಮಧೇನು
ನಾಗರಿಕ ಪ್ರಶಸ್ತಿ ಪದ್ಮಭೂಷಣ
ಕರ್ನಾಟಕ ರತ್ನ
ಶತಮಾನದ ಸತ್ಪುರುಷ
ಅಡಿ ಇಟ್ಟ ನಾಡೆಲ್ಲವೂ
ದೇವಲೋಕ
ಕೋಟ್ಯಾಂತರ ಭಕ್ತರ
ಹೃದಯದ ಸ್ಮರಣಲೋಕ
ಉಳಿಯಲಿ ಅಚ್ಚಳಿಯದೇ
ಶರಣರ ನಡೆ-ನುಡಿಗಳಿಗೆ
ಆದರ್ಶಕ
ಸಿಗಲಿ ನಮಗೆ
ಒಂದಂಶವಾದರೂ
ತನು -ಮನದಲಿ
ತತ್ವ -ಸಿದ್ಧಾಂತ
ನೆನಪಿಸೋನ ಅನುದಿನ
ಅನುಕ್ಷಣ
ದಿವ್ಯ ತೇಜನ 🙏
ಅ
ಡಾ.ಸಾವಿತ್ರಿ ಎಂ ಕಮಲಾಪೂರ