ನಿತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ -ಎ.ಸಿ ಅವಿನಾಶ್ ಸಿಂಧೆ
e-ಸುದ್ದಿ ಲಿಂಗಸುಗೂರು
ವರದಿ ವೀರೇಶ ಅಂಗಡಿ ಗೌಡೂರು
ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ತ ಈಗಾಗಲೇ 29 ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಆಯೋಗದ ಮಾರ್ಗ ಸೂಚಿ ಅನ್ವಯ ನಡೆದುಕೊಂಡು ಪರವಾನಿಗೆ ಪಡೆದುಕೊಂಡು ಪಕ್ಷದ,ಸಭೆ,ಸಮಾರಂಭ ಪ್ರಚಾರಕ್ಕೆ ಮುಂದಾಗಬೇಕು.
ಒಂದು ವೇಳೆ ನಿತಿ ಸಂಹಿತೆ ಉಲ್ಲಂಘನೆ ಮಾಡಿದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಲಿಂಗಸುಗೂರು ಉಪ ವಿಭಾಗಿಯ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಆದ ಸಹಾಯಕ ಆಯುಕ್ತ ಅವಿನಾಶ್ ಸಿಂಧೆ ಸಂಜಿವನ್ ಅವರು ತಿಳಿಸಿದರು.
ಅವರ ಸ್ಥಳಿಯ ಸಹಾಯಕ ಆಯುಕ್ತರ ಕಛೇರಿಯಲ್ಲಿ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು
ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ಚುನಾವಣೆ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಸುವವರೆಗೆ ಪ್ರಚಾರ ಕಾರ್ಯಕ್ಕೆ ಆಯಾ ಪಕ್ಷಗಳ ಅಧ್ಯಕ್ಷರ ಹೆಸರಿನಲ್ಲಿ ಪರವನಾಗಿ ನೀಡಲಾಗುವದು ಎಂದರು.
ತಾಲೂಕಿನ ವಿವಿಧ ಕಡೆ ಹಾಕಲಾಗಿದ್ದ ಬ್ಯಾನರ್, ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ.
ಸಾರ್ವಜನಿಕರು ಕಂಟ್ರೋಲ್ ರೂಂ ಸಂಖ್ಯೆ 08537-257525 , 8088423319 ಕರೆ ಮಾಡಿ ದೂರು ನೀಡಬಹುದಾಗಿದೆ.
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 1,24,126 ಪುರುಷ ಮತ್ತು 1,25,750 ಮಹಿಳೆಯರು ಸೇರಿದಂತೆ ಇತರೆ 9 ಸೇರಿ ಒಟ್ಟು 2,49,885 ಮತದಾರರಿದ್ದಾರೆ.
ತಾಲೂಕಿನಾದ್ಯಂತ ಒಟ್ಟು 278 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಸ್ಥಳೀಯ ಮಟ್ಟದಲ್ಲಿ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಡಿ.ಎಸ್.ಜಮಾದಾರ,ಗ್ರೆಡ್ 2 ತಹಶೀಲ್ದಾರ್ ಬಸವರಾಜ ಝಳಕಿಮಠ,ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಯಾದವ್, ಸೇರಿದಂತೆ ಇತರರು ಇದ್ದರು.