ಅಪರೂಪದ ಸತಿ

ಅಕ್ಕ ಬೆತ್ತಲಾದಳು
ಕಾಮ, ಕ್ರೋದ
ಲೋಭದ ಉಡಿಗೆ
ಹರಿದು..
ಮೋಹ ಮಧ
ಮತ್ಸರಗಳ ತೊಡುಗೆ
ತೊರೆದು..
ಕೇಶಾoಬರದ
ಉಡುಗೆ ತೊಟ್ಟು
ಬಯಲಾದಳು ..

ಅಂಬರದ ಬಯಲು
ಉಡುಗೆ ಆಗಿ
ನಕ್ಷತ್ರದ ಹೊಳಪಿನ
ಚಿತ್ತಾರದಲ್ಲಿ ಮಿಂಚಿದಳು
ಸೂರ್ಯ ಚಂದ್ರರ
ಬೆಳಕಿನಲ್ಲಿ ಬೆಳಿಗಿ
ಬೆಳಕಾದಳು ..

ಆಕಾಶದೆತ್ತರಕ್ಕೆ ಯಾರು
ಏರದ ಏಣಿಯನ್ನು
ಏರಿ ಮಲ್ಲ ನನ್ನ ನಲ್ಲ
ಎಂದು ಸಾರಿ ..
ಅವನಿಗೊಲಿದು
ಅಪರೂಪದ ಸತಿಯಾದಳು..

ಭುವನದಿ ಬೆಳೆದು
ನಿಂತಳು ಉನ್ನತ
ಶಿಖರವಾಗಿ .. ಹಬ್ಬಿದಳು
ಮಲ್ಲಿಕಾರ್ಜುನನ…
ಚಪ್ಪರದ ತೋರಣಕ್ಕೆ
ಬಳ್ಳಿಯಾಗಿ …ಜಗದ ಕವಿಕುಲಕ್ಕೆ
ಅಕ್ಕನಾಗಿ ಬಯಲಲ್ಲಿ ಬಯಲಾಗಿ …
ಅಮರ ಜ್ಯೋತಿಯಾಗಿ

✒️..ಶಾರದಾ ಅಂಬೇಸಂಗೆ ಮುಂಬಯಿ…

Don`t copy text!