ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಸರಳವಾಗಿ 132 ನೇ ಜಯಂತಿ ಆಚರಣೆ….

e-ಸುದ್ದಿ ಇಳಕಲ್

ಇಳಕಲ್ ; ನಗರದ ನಗರಸಭೆ ಮುಂಭಾಗದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪ್ರತಿವರ್ಷ ಆಚರಣೆ ಮಾಡುವಂತೆ ಈ ವರ್ಷವು ಸಹ ಸರಳವಾಗಿ ಸಮುದಾಯದವರು ಆಚರಣೆ ಮಾಡಿದರು.

ಈ ಸಂಧರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಸಿದ್ದಣ್ಣ ಅಮುದಿಹಾಳ ಮಾತನಾಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಜನರಿಗೆ ತಿಳಿಸಿದರು.

ನಾವು ನೀವು ಎಲ್ಲರೂ ಇಂದು ಎಲ್ಲರೂ ಒಂದೆಡೆ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದೇವೆಂದರೆ ಇದಕ್ಕೆಲ್ಲ ಸಂವಿಧಾನವೇ ಕಾರಣ. ಸಂವಿಧಾನವನ್ನು ಬರೆದಂತಹ ಡಾ. ಬಿ.ಆರ್ ಅಂಬೇಡ್ಕರ್ ಒಬ್ಬರೇ ಎಂದರು.

ಇದೇ ಸಂಧರ್ಭದಲ್ಲಿಡಾ . ಬಾಬಾ ಸಾಹೇಬ್ ಸೇವಾ ಸಮಿತಿಯ ಅಧ್ಯಕ್ಷರಾದ ಸಾವಿತ್ರಿಬಾಯಿ ನಾಮದೇವ ಕೋಟೆಗಾರ್,ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ ಆಮದಿಹಾಳ ಹಾಗೂ ಮಹದೇವಾ ಕಂಬಾಗಿ,ಬಸಪ್ಪ ಬೂದಿಹಾಳ,ಮಲ್ಲಪ್ಪ ರೋಣದ,ಚಂದ್ರಪ್ಪ ನಾರಾಯಣಿ,ಈರಪ್ಪ ಎ ಎಸ್ ಸ್ಯಾಮ ಮುದೋಳ ಪವಾಡೇಪ್ಪ ಚಲವಾದಿ,ಶರಣಪ್ಪ ರೋಣದ ಶಾಬ್ಬಣ ಸೂಗುರ ಐ ಹಾಗೂ ಸಮುದಾಯ ಹಿರಿಯರು ಯುವಕರು ಹಿಂದೂ ಸೇವಾ ಟ್ರಸ್ಟ್ ನ ಸರ್ವ ಸದಸ್ಯರು ಸಿರ್ಧಾಥ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯ ವರ್ಗದವರು ಇದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!