ಬದುಕು ಭಾರವಲ್ಲ 9 – ವಿಶೇಷ ಲೇಖನ
ಹುಡುಗನ ದಿಟ್ಟ ನಿಲುವು
ನಮಸ್ಕಾರ ಮೆಡಂ
ಯಾಕೋ ಲಕ್ಷ್ಮಣ ಕಾಲೇಜಿಗೆ
ಬರುತ್ತಿಲ್ಲ ಮೆಡಂ ರೀ ಮೊನ್ನೆಯ ದಿನ ಲಕ್ಷ್ಮಣ ನ ತಂದೆ ತೀರಿದ ಮೆಡಂ ಅದಕ್ಕೆ ಆತ ಬಂದಿಲ್ಲ. ಎಂದ ಬಸು
ಹುಡುಗ ಇನ್ನೂ ಚಿಕ್ಕವ ಪಾಪ ಮನೆಯಲ್ಲಿ ಯಾರು ದೊಡ್ಡವರಿಲ್ಲ ಈತನೇ ಹಿರಿಯ ಮಗ ಒಬ್ಬಳು ತಂಗಿ ಇದ್ದಾಳೆ ಮೆಡಂ .ಹೌದಾ ಎಂದೆ.
ಓದುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ವಹಿಸಲೇ ಬೇಕಾದ ಪ್ರಸಂಗ ಇರುವ ಒಂದೆರಡು ಎಕರೆ ಹೊಲ ಮಾತ್ರ.ತಾಯಿ ತಂಗಿಯನ್ನು ಸಾಕುವ ಜವಾಬ್ದಾರಿಯ ಜೊತೆಗೆ ಬಿಡುವಾದಾಗ ಶಾಲೆಗೆ ಹೋಗುವನು .
ಹಳ್ಳಿಯಾದರೂ ಸಂತೆ ಯಾಗುತ್ತಿತ್ತು. ಲಕ್ಷ್ಮಣ ಕಾಲೇಜಿಗೆ ಹಳ್ಳಿಯಿಂದ ಸುಮಾರು 10/15ಕಿ ಮಿ ದಿನಾಲು ಕಾಲೇಜಿಗೆ ಹೋಗಿ ಬರುತ್ತಿದ್ದ. ಸ್ನೇಹಿತರ ಹುಚ್ಚಾಟ ಬೇಸರ ತೋರುತ್ತಿತ್ತು. ದಿನಾಲು ಹೋಗುವುದು ಬರುವುದು.
ಬಸ್ಸಿನಲ್ಲಿ ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಜಂಗಮವಾಣಿ .ಲಕ್ಷ್ಮಣ ಗೆಳೆಯರ ಕೈಯಲ್ಲಿ ರುವ ಮೊಬೈಲ್ ದಂತಾ ಪೋನ್ ನನಗೂ ಬೇಕು ಎಂದು ತಾಯಿಯನ್ನು ಕಾಡಿಸಿ ಬೇಡಿ 15 ಸಾವಿರ ಇಸಿದುಕೊಂಡು ಪೇಟೆಗೆ ಹೋದನು .ಪೇಟೆಯ ತುಂಬ ಸುತ್ತಾಡಿ ಸುತ್ತಾಡಿ ಒಂದು ಗಿಡದ ಕೆಳಗೆ ಕುಳಿತು
ತಾಯಿ ತಂಗಿಯ ನೆನಪಾಗಿ ಮನೆಗೆ ಬಂದನು.
ಲಕ್ಷ್ಮಣ ಶಾಲೆಯಿಂದ ಮರಳಿ ಹೋಗುವಾಗ ಒಂದು ಹೊಸ ಕರುವನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗಿ ಬಾಗಿಲಲ್ಲಿ ನಿಂತು ತಾಯಿಯನ್ನು ಕೂಗಿ ಕರೆದ ತಾಯಿಯ ಕಂಗಳು ತುಂಬಿ ಬಂದವು.
ಮಗನನ್ನು ಅಪ್ಪಿಕೊಂಡು ಲಕ್ಷ್ಮಣ ನಾನು ನಿನಗೆ ಮೊಬೈಲ್ ಕೊಳ್ಳಲು 15 ಸಾವಿರ ಕೊಟ್ಟಿದ್ದೆ ನೀನು ಏನು ಮಾಡಿದೆ ಎನ್ನುವುದು ಈ ಹೊಸ ಕರು ನೋಡಿ ತಿಳಿದುಕೊಂಡೆ ಲಕ್ಷ್ಮಣ ಎಂದಳು.
ನೋಡಿ ಮೇಲಿನ ಚಿಕ್ಕ ನೈಜ ಚಿಕ್ಕ ಕಥೆಯಲ್ಲಿ ಲಕ್ಷ್ಮಣನ ಇಡೀ ಬದುಕೇ ಅದರಲ್ಲಿ ಅಡಗಿದೆ .
ತಂದೆಯನ್ನು ಕಳೆದುಕೊಂಡು ಸಂಕಟ ನೋವು ಅನುಭವಿಸಿ ಬದುಕೇ ಭಾರವಾದ ಲಕ್ಷ್ಮಣನಿಗೆ
ಬದುಕನ್ನು ತಾನೇ ಹಗುರ ಮಾಡಿಕೊಂಡ .
ಮನೆಯಲ್ಲಿ ಒಂದೇ ಒಂದು ಕರು ಇದ್ದು ಇದರ ಜೋಡಿಗೆ ತಾಯಿ ಕೊಟ್ಟ 15 ಸಾವಿರಲ್ಲಿ ಹೊಸ ಕರುವನ್ನು ಸಾಗುವಳಿಗೆ ಹಚ್ಚಿದನು .
ತನ್ನ ಬದುಕನ್ನು ತಾನೇ ಕಟ್ಟಿಕೊಂಡು ಇತರರಿಗೆ ಮಾದರಿಯಾಗುತ್ತಾನೆ.
ಬದುಕನ್ನು ಸುಂದರವಾಗಿ ಮಾಡಿಕೊಳ್ಳುವುದು ಅದು ಗಂಡುಮಕ್ಕಳೇ ಇರಲಿ ಹೆಣ್ಣು ಮಕ್ಕಳೇ ಇರಲಿ ಅವರವರ ಕೈಯಲ್ಲಿಯೇ ಇದೆ .
ಯಾಕೆ ಮೊಬೈಲ್ ತರಲಿಲ್ಲವೆಂದು ತಂಗಿ ಕೇಳಿದಾಗ ತಂಗಿ ಅಪ್ಪ ತೀರಿದ ಮೇಲೆ ನನಗೆ ಅಪ್ಪನ ನೆನಪು ತುಂಬಾ ಬರುತ್ತಿತ್ತು .ನನಗೂ ನನ್ನ ಗೆಳೆಯರ ಹಾಗೆ ಹೊಸ ಮೊಬೈಲ್ ಕೊಂಡುಕೊಳ್ಳುವ ಆಸೆ ಇತ್ತು.ಆದರೆ ಮುಂದಿನ ನಮ್ಮ ಜೀವನ ಹೇಗೆ ಮನೆಯಲ್ಲಿ ಕರು ಒಂದೇ ಇದೆ ಅದರ ಜೊತೆಗೆ ಮತ್ತೊಂದು ಕರು ತೆಗೆದುಕೊಂಡರೆ ಹೊಲವನ್ನು ಸಾಗುವಳಿ ಮಾಡಬಹುದು .ಉತ್ತಮ ಸಾಗುವಳಿ ಮಾಡಿದರ ಇಂತಹ ಹತ್ತು ಮೊಬೈಲ್‌ನ್ನು ನನ್ನ ತಂಗಿಗೆ ತಂದು ಕೊಡುವೆ ಎಂದನು .
ನಮ್ಮ ಸಮಾಜದಲ್ಲಿ ಇಂತಹ ನೂರೆಂಟು ಲಕ್ಷ್ಮಣ ರು ಇದ್ದರೆ ಊರು ಸುಧಾರಿಸುತ್ತದೆ .ದೇಶ ಪ್ರಗತಿ ಕಾಣುತ್ತದೆ ಅಲ್ಲವೇ ?
ಇದನ್ನೇ ಶಿವಶರಣರು ಕಾಯಕದಲ್ಲಿ ಕೈಲಾಸ ಕಂಡವರು .ಕಾಯದಲ್ಲಿ ಭಗವಂತನನ್ನು ಕಂಡವರು .ಪ್ರತಿಯೊಬ್ಬ ಶಿವಶರಣರಿಗೆ ಕಾಯಕದ ಅರಿವನ್ನು ಮೂಡಿಸಿದವರು .ನಮ್ಮ ಬಸವಾದಿ ಪ್ರಮಥರು .ದುಡಿಮೆಯೇ ದೇವರೆಂದು ಸಾಗಿದವರು .