ಅಪಾರ್ಥ…

ಅಪಾರ್ಥ…

ನಾ ಏನೆಲ್ಲ ಅಂದರೂ
ಮುಗಳ್ನಕ್ಕು ಮುಂದು ಹೋಗೋ
ಸಹನೆಗೆ ಹ್ಯಾಟ್ಸಾಪ ಕಣೋ
ನಿನ್ನ ಮನದಿ ಅಪಾರ್ಥಕೆ ಅವಕಾಶವೇ ಇಲ್ಲ

ನಾನೋ ಸದಾ ಸಂದೇಹಿ
ಪ್ರತಿ ಹೆಜ್ಜೆಯಲಿ,ಮಾತಿನಲಿ
ಸಂಶಯಭಾವ ತೋರಿದರೂ
ಕಿಂಚಿತ ಕೀಳರಿಮೆ ಮಾಡಲಿಲ್ಲ

ನನ್ನ ಪ್ರೀತಿಸಿದ ಹುಡುಗನೇ
ನಿನ್ನಲಿ ಅಪಾರ್ಥ ಹುಡಕಲು
ನನಗಿನ್ನೂ ಸಾಧ್ಯವೆ ಇಲ್ಲ ಸಖ
ತೂಕದ ಮಾತು ತುಂತುರು ಸುಖ

ಸಹನೆ,ತ್ಯಾಗಗಳ ವಿನಯವಂತ
ನಿನ್ನಲಿ ದೋಷ ಹುಡುಕುವದು
ಅಪರಂಜಿಯಲಿ ದೋಷ ಹುಡುಕಿದಂತೆ
ನಿನಗೆ ಅಪಾರ್ಥದ ಸುಳಿವು ಸುಳಿಯಲಿಲ್ಲ

ಕಾರಣ ನಿನ್ನ ಅದಮ್ಯ ಪ್ರೀತಿ ಕಣೋ
ಹೇಳದೆ ಮಾಡುವ,ಕೇಳದೆ ನೀಡುವ
ಸಹೃದಯಿ ಸರದಾರನೇ ಸಖ ನೀನು
ನೀ ಒಲಿದದ್ದು ನೂರು ಜನ್ಮದ ಸುಕೃತ….

ಮುಂದೆಂದಿಗೂ ಅಪಾರ್ಥ ಬಾರದಿರಲಿ
ಅಪಾರ್ಥದ ನಿನ್ನ ಹುಡುಗಿಯ ಮನ್ನಿಸಿದ
ಮಧುರ ಭಾವದ ನಿನಗೆ ಏನೆನ್ನಬೇಕು..
ಎದೆಯ ಅಪಾರ್ಥದ ಭಾರ ಇಳಿಸಿದೆ

ಭಾವಗೀತೆಯಾದೆ ಒಲವ ಭಾವಜೀವಿ
ನನ್ನೆಲ್ಲ ಕೀಟಲೆಗಳನ್ನ ನುಂಗಿ
ನನಗೆ ಪ್ರೀತಿಯ ಅಮೃತ ಹನಿಸಿದೆ
ದೇವರಂಥ ಗೆಳೆಯನೇ ಹೇಗೆ ಬಣ್ಣಿಸಲಿ

ಅಪಾರ್ಥದ ಅನುಮಾನದ ಗೆಳತಿ
ಸದಾ ನಿನ್ನವಳು ಕಣೋ….


ಜಯಶ್ರೀ ಭ ಭಂಡಾರಿ.
ಬಾದಾಮಿ.

Don`t copy text!