ಜಿಲ್ಲಾ ದಸ್ತು ಬರಹಗಾರರಿಂದ ಉಪ ನೊಂದಣಿ ಅಧಿಕಾರಿ ಪ್ರವೀಣ್ ಮ್ಯಾಗೇರಿಗೆ ಸತ್ಕಾರ …
e-ಸುದ್ದಿ ವರದಿ:ಇಳಕಲ್
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಉಪ ನೊಂದಣಿ ಕಾರ್ಯಾಲಯದ ಅಧಿಕಾರಿ ಪ್ರವೀಣ್ ಮ್ಯಾಗೇರಿ ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ರಾಮಣ್ಣ ಲಮಾಣಿಯವರಿಗೆ ಜಿಲ್ಲಾ ದಸ್ತು ಬರಹಗಾರರಿಂದ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಸ್ತು ಬರಹಗಾರರಾದ ಸಿದ್ದಪ್ಪ ಲ ಘಂಟಿ, ವೀರಭದ್ರಪ್ಪ ಸಿ ಹಲಕಾವಟಗಿ, ಸಂಗನಗೌಡ ಎಸ್ ಮಾಲಿ, ಮಂಜುನಾಥ್ ಹೂಗಾರ, ಹಾಗೂ ಸಿಬ್ಬಂದಿ ಸಂಗಣ್ಣ,ಮಹಾಂತೇಶ ಹಾಗೂ ಇತರರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ