ಹಾವರಗಿ ಗ್ರಾಮದಲ್ಲಿ ಲಿಂಗೈಕ್ಯ ಎಸ್ ಆರ್ ಕಾಶಪ್ಪನವರ ಅವರ 21ನೇ ಪುಣ್ಯ ಸ್ಮರಣೆ …
e-ಸುದ್ದಿ ಇಳಕಲ್
ಎಸ್ ಆರ್ ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದಿಂದ ಜನಾನುರಾಗಿ, ಮುತ್ಸದ್ದಿನಾಯಕ, ಮಾಜಿ ಸಚಿವರಾದ ಲಿಂಗೈಕ್ಯ ಎಸ್ ಆರ್ ಕಾಶಪ್ಪನವರ ಅವರ 21ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ನಡೆಯಿತು.
ನಾಡಿನ ಅರ ಗುರು ಚರ ಮೂರ್ತಿಗಳು ವೇದಿಕೆ ಮೇಲಿರುವ ಗಣ್ಯಮಾನ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಗೌರಮ್ಮ ಎಸ್ ಕಾಶಪ್ಪನವರ್ ವಹಿಸಿಕೊಂಡಿದ್ದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ವೀಣಾ ಕಾಶಪ್ಪನವರ ಹಾಗೂ ಎಸ್ ಆರ್ ಕೆ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ