ಮಾಡಬೇಡ ಚಿಂತೆ

ಮಾಡಬೇಡ ಚಿಂತೆ
ಬಾಲ್ಯದಲ್ಲಿ ಬಲು ಬೇಗ ಮದುವೆ ಮಾಡೇನಂತ/ಬಹಳ ಕೊರಗಬೇಡ ಮನದಾಗ ಹಡೆದವ್ವ ಚಿಂತಿ ಮಾಡಬೇಡ ಮನದಾಗ

ಬಸವಣ್ಣನ ಗುಡಿ ಮುಂದ ಬಾನಕ್ಕಿ ಆಡ್ಯಾವ/ನಮ್ಮ ನೋಡಿ ಬಲು ಜೋಡಿ ಅಂದಾವ
ಹಡದವ್ವ ಚಿಂತಿಯಿಲ್ಲದೆ ನಾನು ಬದಕೀನಿ

ಬಡತನ ವಿದ್ದರೂ ಸಿರಿವಂತ ನನ್ನ ಗಂಡ/ಸುಖದ ಉಯ್ಯಾಲೆ ಕಟ್ಟೈನ ಒಂದಂದ್ರ ಎರಡು ಕೊಡಿಸ್ಯಾನ

ಗೊಂಬೆಯಾ ಚೆಲುವಿನ ಗಂಭೀರ ನನ ಗಂಡ/ರೆಂಬೆ ಯರು ಬಂದು ಕಚಗೂಳಿ ಇಟ್ಟರೆ ನಗುಮುಖದ ನೋಟ ನನ್ನೆಡೆಗೆ

ತವರಿಗೆ ಬಂದಿಲ್ಲಂತ ತೇವ ವಾಗದಿರಲಿ ನಿನ ಕಣ್ಣು/ತಂಪಿನ ಗಿಡವ ನೆಟ್ಟಾನ ಹಡೆದವ್ವ ಚಿಂತಿ ಮಾಡಬ್ಯಾಡ ನನ್ನ ಕಡೆಗೆ

ಬಹಳ ವರ್ಷದ ಮೇಲೆ ಮುದ್ದಾದ ಮಗಳು ಹುಟ್ಟಿ/ತಾಯಿತನದ ಸುಖವ ಕೊಟ್ಟಾಳ ಹಡೆದವ್ವ ಬದುಕಿ ಗೊಂದರ್ಥ ತಂದಾಳ

ಡಾ. ಶರಣಮ್ಮ ಗೊರೆಬಾಳ

Don`t copy text!