ಸಾಹಿತ್ಯ ರತ್ನ ಪ್ರಶಸ್ತಿಗೆ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಆಯ್ಕೆ.

ಸಾಹಿತ್ಯ ರತ್ನ ಪ್ರಶಸ್ತಿಗೆ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಆಯ್ಕೆ.

ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕರ ಸಂಘ ಶ್ರೀ ಅಮರನಾಥ ಗುರುಕುಲ ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘ ಕೊಪ್ಪಳ ಇವರ ಸಹಯೋಗದಲ್ಲಿ. ಪ್ರಥಮ ಬಾರಿಗೆ ರಾಜ್ಯಮಟ್ಟದ ಗುರು ಸಭಾರಿ ಪಟ್ಟಾಧಿಕಾರ ಹಾಗೂ ನಿರಂಜನ ಜಂಗಮ ಸೇವಾ ದೀಕ್ಷೆ ಶಾಂಭವಿ ದೀಕ್ಷೆ ಪಟ್ಟಾಧಿಕಾರ ಪ್ರಾಯೋಗಿಕ ಕಾರ್ಯಾಗಾರವನ್ನು ದಿನಾಂಕ ಫೆಬ್ರವರಿ 19.20. 2024 ರಂದು ಎರಡು ದಿನಗಳ ಕಾಲ ಶ್ರೀ ಸಪ್ತಲಿಂಗೇಶ್ವರನ ಗದಗ ರಸ್ತೆ ಜಿಲ್ಲಾ ಕ್ರೀಡಾಂಗಣದ ಎದುರುಗಡೆ ಕೊಪ್ಪಳದಲ್ಲಿ ನಡೆಯಲ್ಲಿದ್ದು ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕರ ಸಂಘದ ರಾಜ್ಯಾಧ್ಯಕ್ಷರಾದ ಆಗಮ ಸಂಸ್ಕೃತ ವಿದ್ವಾನ್ ಚಂದ್ರಶೇಖರಯ್ಯ ಶಾಸ್ತ್ರಿಗಳು ತಿಳಿಸಿದ್ದಾರೆ.

ಪಂಪಯ್ಯಸ್ವಾಮಿ ಸಾಲಿಮಠ ಅವರು ಸಿಂಧನೂರು ತಾಲ್ಲೂಕು ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.

Don`t copy text!