ಆಗ್ಲೇ ಆಯ್ತಾ ವರ್ಷಾ? ‘

ಆಗ್ಲೇ ಆಯ್ತಾ ವರ್ಷಾ? ‘

 

 

 

 

 

 

 

 

 

 

 

ನಮ್ಮ ಕುಂಬಿ ಅಂದ್ರೆ ಸುಮ್ನೆನಾ?
ಆಗ್ಲೇ ಆಯ್ತಲ್ಲ ಅವ್ನಿಗೆ ಒಂದೊರ್ಷ
ಅಮ್ಮಂಗ ಫೋನ್ ಬಂದ್ರೆ ಆಯ್ತು
ಶುರು ಮಾಡ್ತಾನೆ ಪೌಂವ್ ಪೌಂವ್!

ಅಡಿಗಿ ಮನಿಗಿ ನುಗ್ಗಿ ಬೀಳಸ್ತಾನಿಂವಾ
ಸಾಸಿವಿ ಜೀರಗಿ ಮತ್ತs ಬೆಲ್ಲ ಈ ಕಳ್ಳs
ಶೆಂಗಾ ಪುಟಾಣಿ ಜೋಡಿ ಶುರು ಇವ್ನ
ಆಟ ಜೊತೆ ಬೇಕಂತೆ ಸೈಕಲ್ ಸವಾರಿ!

ಅಣ್ಣ ಅಂದ್ರೆನೇ ಇಂವಗೆ ಪಂಚಪ್ರಾಣ
ಗುಂಡ್ಯಾ ಕುಂಬಿ ಕೂಡೇ ಹೊಡಿತಾರಲ್ಲ
ಲಗಾಟಿ ಪಗಾಟಿ ಮಂಚದ ಮ್ಯಾಲೇರಿ
ಇವ್ರ ಗಲಾಟೆ ಕೇಳಿ ಬೆಕ್ಕ ಆತು ಫರಾರಿ!

ವಿಡಿಯೋ ಕಾಲ್ ಮಾಡಿದ್ರ ಮೊಬೈಲ್
ಕಸ್ಗೊಂತಾನ ಅಮ್ಮನ ಕೈಯಿಂದ ಹಾರಿ
ಅಡ್ಡಡ್ಡ ಉದ್ದುದ್ದ ಹಿಡ್ದು ನಗ್ತಾನ ನೋಡ್ರಿ
ಎಲ್ಲಾರ್ಗೆ ಮೋಡಿ ಮಾಡ್ತದs ಇವ್ನ ನಗಿರಿ!

ಕುಂಬಿ ಅಂದ್ರ ಗೊಂಬಿ ಅಂದಾಳ ಪೂಜಿ
ಅವಳ ಜೋಡಿ ಅಜ್ಜಿನೂ ಬಂದಾಳೋಡಿ
ಅಪ್ಪು ನಕ್ಕಾನ ಅಲ್ಲೇ ಮೀಸಿ ತೀಡಿ ತೀಡಿ
ಕೇಕ್ ಕಟ್ ಮಾಡಿ ಹಾಡಾ ಹಾಡಲಿಕತ್ತಾರ
ಎಲ್ಲಾ ಗ್ಯಾಂಗ್ ಗುಂಡ್ಯಾ ಸ್ಮೈಲ್ ನೋಡಿ!

ಬರ್ರಿಲ್ಲಿ ಭಾರತೀಶ ನಿಮ್ಮ ಫ್ರೆಂಡ್ ಗುಂಡ್ಯಾನ
ತಮ್ಮ ಕುಂಬಿ ಹ್ಯಾಂಗ ಎದ್ದು ನಿಂತದ ನೋಡ್ರಿ!
ವಿಜು ಮೂರ್ತಿ ಸಚಿನ ಅಮ್ಮು ಸಂಜಯರೆಲ್ಲ
ಕರ್ಕೋಬಂದ್ರು ಪುಷ್ಪಾ ಸ್ಮಿತಾನ ಅಲ್ಲವೇನ್ರಿ?
ಅವ್ರ ಜೊತೆ ವೆಂಕು ನಿಶಾ ಸಾತ್ವಿಕ ಸ್ವರೂಪರು
ಬಂದೇಬಿಟ್ರು ಕಲಬುರಗಿಯಿಂದ ಖುಷಿಯಾಗ್ರಿ!

ಶ್ರೀಧರ ನೀನೂ ಬಾ ಇಲ್ಲಿ ಶ್ರೀಪಾದನ ಜೋಡಿ
ಸೀಮಾ ಅಕ್ಕದೇರು ಬಂದ್ರಲ್ಲಾ ನಗು ನಗುತಲಿ
ಜೀಜು ಎಲ್ಲಾರೂ ಸೇರಿ ಬಂದ ಬಿಟ್ರು ನೋಡಿ
ಹಾಂ! ಎಲ್ಲೇವನು ಕುಂಬೀ ಅಂತಾ ಓಡೋಡಿ!

ವಾಸುಕೀ ವೈಭವಕ್ಕs ಸಾಕ್ಷಿ ಆದಳು ಮುತ್ತಜ್ಜಿ
ಮತ್ತs ಅಂವಾ ಅಜ್ಜಾ ಬಂದೇ ಬಿಟ್ಟ ಹಾಡಾs
ಹಾಡ್ಕೊಂತ ನಕ್ಕೊಂತ ಕುಂಬಿ ಗುಂಡ್ಯಾ ಅಂತ
ಶುರು ಆತ ನೋಡ್ರಲ್ಲೇ ಕುಚಪುಡಿ ಭರತನಾಟ್ಯ!

ಹೀಂಗೇ ಸಾಗಲಿ ನೂರೆಂಟು ವರ್ಷ ಹರ್ಷದಿ
ದೇವ ಜೇನು ಸುರಿಸಲಿ ಕಂದಮ್ಮಗಳ ಬಾಳಲಿ
ರಾಯರು ಮೃತ್ತಿಕೆ ನೀಡಲಿ ತಪ ನಯನದಿಂದ
ಅಲ್ಲಿಗೇ ಉದಯವಾಯಿತು ನೋಡಿ ನಗುತ
ಚೆಲುವ ಕನ್ನಡನಾಡು ಪವನೊಲುಮೆಯಿಂದ!
ಸುಮಂಗಲೆಯ ಅಂತ:ಕರುಣದ ಮನದಿಂದ!

ಸಪ್ತ ಸಾಗರದಾಚೆ ಎಲ್ಲೋ ಇಲ್ಲ ಇಲ್ಲೇ ಇದೆ
ಪ್ರೀತಿ ಬನ್ನಿ ಎಲ್ಲ ಸವಿಯಿರಿ ಸಿಹಿ ಬಾಯಿಂದ!

ಶ್ರೀನಿವಾಸ ಜಾಲವಾದಿ
ಸುರಪುರ

Don`t copy text!