ಸಿದ್ದರಾಮೇಶ್ವರ ಗಡಾದ ಅವರಿಗೆ ಒಲಿದು ಬಂದ ಮುಖ್ಯಮಂತ್ರಿಗಳ ಪದಕ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದವರಾದ ಸಿದ್ದರಾಮೇಶ್ವರ ಗಡಾದ ಅವರು ಮೂಲತಃ ಹುಟ್ಟಿ ಬೆಳೆದದ್ದು ಬಡತನದ ಕುಟುಂಬದಲ್ಲಿ.
ಬಡತನದಲ್ಲಿ ಓದಿದ ಸಿದ್ದರಾಮೇಶ್ವರ ಗಡಾದ ಅವರು ಸರ್ಕಾರಿ ನೌಕರಿ ಪಡೆಯಲು ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ವಿಧ್ಯಾಭ್ಯಾಸ ಮಾಡಿ
ಡಿ.ಇಡಿ ಶಿಕ್ಷಣ ಪಡೆದ ನಂತರ ಮೊಟ್ಟ ಮೊದಲ ಬಾರಿ ಸರ್ಕಾರಿ ನೌಕರಿ ಪಡೆದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ಲಿಂಗಸುಗೂರು ತಾಲ್ಲೂಕಿನ ಯಲಗಟ್ಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಲ ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸರ್ಕಾರಿ ಸೇವೆ ಆರಂಭಿಸುತ್ತಾರೆ.
ಛಲ ಬಿಡದೆ ಓದಿನ ಅವರ ಪರಿಶ್ರಮದಿಂದ 2007 ರಲ್ಲಿ ಪಿ.ಎಸ್.ಐ ಪರಿಕ್ಷೆ ಯಲ್ಲಿ ತೆರ್ಗಡೆ ಹೊಂದುತ್ತಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ರಾಯಚೂರು ನಗರ ಸಂಚಾರಿ ಪೋಲಿಸ್ ಠಾಣೆಗಳಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಯಚೂರಿನಲ್ಲಿ 2016 ರಲ್ಲಿ ನಡೆದ 82 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಚಾರಿ ವಾಹನಗಳ ದಟ್ಟಣೆ ನಿರ್ವಹಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದರು.
ಅದೇ ರೀತಿ ಕಲಬುರ್ಗಿಯಲ್ಲಿ 2020 ದಿಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನದಲ್ಲಿಯೂ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದರು.
2019 ರ ಆಗಸ್ಟ್ ನಲ್ಲಿ ಪಿ.ಎಸ್.ಐ ಹುದ್ದೆಯಿಂದ ಸಿ.ಪಿ.ಐ ಹುದ್ದೆಗೆ ಬಡ್ತಿ ಪಡೆದ ಇವರು ಪ್ರಸ್ತುತ ಬಳ್ಳಾರಿ ಜಿಲ್ಲೆಯ ಗಾಂಧಿನಗರದ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದರಾಮೇಶ್ವರ ಗಡಾದ ಅವರು ಕೊಲೆ ಪ್ರಕರಣ ಪತ್ತೆ ಮತ್ತು ಎಂಟು ಕಳ್ಳತನ ಪ್ರಕರಣಗಳಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿ ವಾರುಸುದಾರರಿಗೆ ಹಿಂದುರಿಗಿಸಿ ಇಲಾಖೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ 2023 ರ ಸಾಲಿನ ಮುಖ್ಯಮಂತ್ರಿಗಳ ಪದಕ ಒಲಿದು ಬಂದಿದ್ದು. ಅವರ ಈ ಸಾಧನೆಗೆ ಕುಟುಂಬ ವರ್ಗ,ಬಂಧು ಮಿತ್ರರು ಅಪಾರವಾದ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.
–
—ವೀರೇಶ ಅಂಗಡಿ ಗೌಡುರು