ಅನುಭವ ಚಿಂತನ ಅಧ್ಯಯನ ಇಂದಿನ ಅಗತ್ಯ

ಅನುಭವ ಚಿಂತನ ಅಧ್ಯಯನ ಇಂದಿನ ಅಗತ್ಯ

 

 

 

 

 

 

 

 

 

 

ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ ಸಮತಾವಾದಿ ಬದುಕಿನ ಎಲ್ಲ ಮಗ್ಗಲುಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಸರಿಯಾದ ಮಾರ್ಗದರ್ಶಿ ಸೂತ್ರವನ್ನು ಕೊಟ್ಟವರು ಬಸವಣ್ಣನವರು.

ಅವರ ವಚನ ಶರಣ ಅನುಭಾವ ಚಿಂತನೆ ಮತ್ತು ಅವುಗಳ ನಿರಂತರ ಅಧ್ಯಯನದ ಕೊರತೆ ಇಂದು ಎದ್ದು ಕಾಣುತ್ತಿದೆ.
ಪೌರೋಹಿತ್ಯವಿಲ್ಲದ ಆಶ್ರಮರಹಿತ ಜಗತ್ತಿನ ಏಕೈಕ ಧರ್ಮ ಲಿಂಗವಂತ ಧರ್ಮ
1 ) ಲಿಂಗಾಯತ ಧರ್ಮದಲ್ಲಿ ಎಲ್ಲ ಕಸುಬಿನವರು ಇದ್ದಾರೆ ಇದೊಂದು ಫೆಡರಲ್ ರಿಲಿಜನ್ ಒಕ್ಕೂಟ .ವೃತ್ತಿಗಳಿವೆ ಹೊರತು ಜಾತಿಗಳಿಲ್ಲ.
2 ) ಬಸವಣ್ಣನವರ ಸಾಮಾಜಿಕ ಕ್ರಾಂತಿ ಜಾತಿ ವಿಮೋಚನೆ ಸ್ತ್ರೀ ವಿಮೋಚನೆ ಆರ್ಥಿಕ ಸಮಾನತೆ ಸಹ ಬಂಧುತ್ವ ಸಹ ಬಾಳ್ವೆ ಅಕ್ಷರ ಕ್ರಾಂತಿ ನೈತಿಕ ಕ್ರಾಂತಿ ಪರಿವರ್ತನೆ
3 ) ಬಸವಣ್ಣ ಒಬ್ಬ ಮೂರ್ತಿ ಭಂಜಕ -ಬಹುದೇವೋಪಾಸನೆಯನ್ನು ಕಟುವಾಗಿ ವಿರೋಧಿಸಿ ಜಡವಾದ ಗುಡಿ ಸಂಸ್ಕೃತಿಯಿಂದ ಸಮಷ್ಟಿ ಭಾವದ ಇಷ್ಟಲಿಂಗದ ಪರಿಕಲ್ಪನೆಯನ್ನು ಕೊಟ್ಟು ಭಕ್ತನೇ ದೇವನಾಗುವ ಸುಂದರ ಸಿದ್ಧಾಂತವನ್ನು ಕೊಟ್ಟರು.
4 ) ಲಿಂಗಾಯತ ಧರ್ಮದಲ್ಲಿ ಯಜ್ಞ ಹವನ ಹೋಮ ಪೂಜೆ ಜಪ ತಪ ಮಾಡಿ ಮೈಲಿಗೆಗಳಿಲ್ಲ .ಭಾವ ಶುದ್ಧವಾಗಿ ಶರಣರ ತಿಪ್ಪೆಯ ತಪ್ಪಲವನ್ನಾದರೂ ತಂದು ನಿಶ್ಚಯಿಸಿ ಮಾಡಬೇಕು.
5 ) ಲಿಂಗಾಯತ ಧರ್ಮದಲ್ಲಿ ಭಿಕ್ಷೆ ಇಲ್ಲ ದಾನವೂ ಇಲ್ಲ ಆದರೆ ಎಲ್ಲರೂ ದುಡಿದ ಆದಾಯದಲ್ಲಿ ದಾಸೋಹವನ್ನು ಮಾಡಬೇಕಾದದ್ದು ಕಡ್ಡಾಯವಾಗಿದೆ.
6 ) ಕಾಯಕ ಶ್ರಮಕ್ಕೆ ಬಸವಣ್ಣನವರು ಪ್ರಾಧಾನ್ಯತೆ ಕೊಟ್ಟಿದ್ದಾರೆ.
7 ) ವರ್ಗ ವರ್ಣ ಲಿಂಗ ಭೇದ ಆಶ್ರಮ ಭೇದ ಎಲ್ಲ ಭೇದ ರಹಿತ ಸಮಾನತೆಯ ಲಿಂಗಾಯತ ಧರ್ಮ ಅವುಗಳ ಪುನರ್ ಅವಲೋಕನ ಇಂದಿನ ಅಗತ್ಯವಾಗಿದೆ.

ವಚನಗಳ ಅನುಭವ ಚಿಂತನ ಅಧ್ಯಯನ ಮರು ಮೌಲ್ಯಮಾಪನ ಶುದ್ಧೀಕರಣ ಇಂದಿನ ಅಗತ್ಯತೆಯಾಗಿದೆ

 

 

 

 

 

 

 

 

 

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!