ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು -ಲಿಂಗಾಯತನಾಗುತ್ತಿದೆ ಎಂದ್ದಿದ್ದರು
ಡಾ ಭೀಮರಾವ್ ಅಂಬೇಡ್ಕರ ಭಾರತದ ಸಮತಾ ಸೇನಾನಿ ಬುದ್ಧ ಬಸವಣ್ಣ ಫುಲೆಯವರ ನಂತರ ದೇಶದಲ್ಲಿ ಸಮಾನತೆ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ.
ನಾಸಿಕದ ಕಾಳ ರಾಮ ಮಂದಿರದಲ್ಲಿ ಪ್ರವೇಶ ನಿರಾಕರಣೆ ವಿರುದ್ಧ ಸಂಘರ್ಷಕ್ಕಿಳಿದು ದಲಿತರಿಗೆ ಗುಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು . ಅವರಿಗೆ ಎಲ್ಲ ಹಂತದಲ್ಲೂ ಸಹಾಯಮಾಡಿದವರು ಅಂದಿನ ಮುಂಬೈ ರಾಜ್ಯದ ಶಿಕ್ಷಣ ಮತ್ತು ಕಾನೂನು ಮಂತ್ರಿಯವರಾದ ಕರ್ನಾಟಕದ ಹುಬ್ಬಳ್ಳಿಯ ಹುಲಿ ಸರ್ ಸಿದ್ದಪ್ಪ ಕಂಬಳಿಯವರು.
ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು 1956 ರಲ್ಲಿ ತಮ್ಮ ಅನಾರೋಗ್ಯದ ನಿಮಿತ್ತ ಧಾರವಾಡದಲ್ಲಿ ಚಿಕಿತ್ಸೆಗೆ ಬಂದಿದ್ದರು ಧಾರವಾಡದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವ ಅಂಬೇಡ್ಕರ್ರವರ .ಅವರನ್ನು ನೋಡಲು ಬಂದಿದ್ದ ಮುಂಬೈ ಸರಕಾರದ ಮಾಜಿ ಕಾನೂನು ಮತ್ತು ಶಿಕ್ಷಣ ಮಂತ್ರಿಗಳು ಸರ್ ಸಿದ್ದಪ್ಪ ಕಂಬಳಿ ( ಡಾ ಅಂಬೇಡ್ಕರ ಅವರ ರಾಜಕೀಯ ಗುರುಗಳೂ ಕೂಡಾ ) ಸರ್ ಸಿದ್ದಪ್ಪ ಕಂಬಳಿಯವರು ಮೊದಲ ಅಹಿಂದ ಚಳುವಳಿಯನ್ನು ಆರಂಭಿಸಿದ ನೇತಾರರಾಗಿದ್ದರು.
ತಮ್ಮ ಜೊತೆಗೆ ಡಾ ಫ ಗು ಹಳಕಟ್ಟಿ ಅವರ ವಚನಗಳ ಭಾಷಾಂತರ ಗ್ರಂಥವನ್ನು ಡಾ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕೊಟ್ಟು ಓದಲು ಹೇಳಿದರಂತೆ.
ಕೆಲವು ದಿನಗಳ ಮೇಲೆ ಸರ್ ಸಿದ್ದಪ್ಪ ಕಂಬಳಿ ಅವರು ಮತ್ತೆ ಡಾ ಬಾಬಾಸಾಹೇಬ ಅಂಬೇಡ್ಕರ್ ನ್ನು ಭೇಟಿಯಾದಾಗ .ಬಸವಣ್ಣನವರ ಕ್ರಾಂತಿ ವಚನಗಳನ್ನು ಮನಸಾರೆ ಶ್ಲಾಘಿಸಿ ನನಗೆ ಇಂತಹ ಅಪೂರ್ವ ಸಾಹಿತ್ಯ ಮೊದಲೆ ಸಿಕ್ಕಿದ್ದರೆ ನಾನು ಲಿಂಗಾಯತನಾಗುತ್ತಿದ್ದೆ ಎಂದಿದ್ದರಂತೆ.
(ಕೃಪೆ . ಡಾ ಪಾಟೀಲ ಪುಟ್ಟಪ್ಪ -ಅವರ ಸರ್ ಸಾಹೇಬ್).
ಜಗತ್ತಿನ ಸಮಸ್ತ ಸಮತಾ ಸೇನಾನಿಗಳಿಗೆ ಆದರ್ಶನಾದ ನಮ್ಮ ಬಸವಣ್ಣ ಇಂದು ಒಂದು ವರ್ಗಕ್ಕೆ ಜಾತಿಗೆ ಮಠಗಳಿಗೆ ಸೀಮಿತವಾಗಿದ್ದು ದುರಂತವೇ ಸರಿ. ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವ ಮನಸುಗಳು ನಮ್ಮಲಿಲ್ಲ .
ಇನ್ನೊಂದು ಸಂದರ್ಭದಲ್ಲಿ,
1950 ಸವಿತಾ ಮಹಿಳಾ ಮೀಸಲಾತಿ ಮಸೂದೆ ಮೇಲೆ ಚರ್ಚೆ ನಡೆದು ಮಹಿಳೆಯರಿಗೆ ಮೀಸಲಾತಿ ವಿಷಯಕ್ಕಾಗಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರು ಅವರ ವಿರುದ್ಧ ಸಂಸತ್ತಿನಲ್ಲಿ ಧರಣಿ ನಡೆಸಿ ಭಾರತದಲ್ಲಿ ಬುದ್ಧನೊಬ್ಬನೇ ಮಹಿಳೆಯರಿಗೆ ಸ್ಥಾನಮಾನ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಆಗ್ರಾ ಗಣ್ಯ ಪ್ರವರ್ತಕ ಎಂದಿದ್ದರಂತೆ. ಆಗ .ಕರ್ನಾಟದ ಮಾಜಿ ಮುಖ್ಯ ಮಂತ್ರಿ ಮತ್ತು ಅಂದಿನ ಸಂಸತ್ತ ಪಟು ಶ್ರೀ ಎಸ ನಿಜಲಿಂಗಪ್ಪನವರು ಡಾ ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಬಸವಣ್ಣ ಶರಣರ ವೈಚಾರಿಕ ಕ್ರಾಂತಿಯ ಗ್ರಂಥಗಳನ್ನು ಓದಲು ಕೊಟ್ಟರಂತೆ . ಸಂಸತ್ತಿನ ಕಾರಿಡಾರನಲ್ಲಿ ಅಂಬೇಡಕರ ಅವರು ನಿಜಲಿಂಗಪ್ಪನವರನ್ನು ಒಂದು ವಾರದ ಮೇಲೆ ಭೇಟಿಯಾದಾಗ.ನೀವು ಬಸವಣ್ಣನವರನ್ನು ಪುಸ್ತಕ ಮಾಡಿ ನಿಮ್ಮ ಜೇಬಿಗೆ ಇಟ್ಟು ಬಿಟ್ಟಿರಿ..ಒಂದು ವೇಳೆ ಅವರ ತತ್ವಗಳನ್ನು ಪ್ರಚಾರ ಮಾಡಿದ್ದರೆ ಇಂದು ಲಿಂಗಾಯತ ಧರ್ಮವು ವಿಶ್ವವ್ಯಾಪಿಯಾಗಿ ಪಸರಿಸುತಿತ್ತು ಎಂದರಂತೆ.(ಕೃಪೆ ನನ್ನ ಆತ್ಮ ಚರಿತ್ರೆ ಎಸ. ನಿಜಲಿಂಗಪ್ಪನವರು.)
ಬಸವಣ್ಣನವರನ್ನು ಡಾ ಬಾಬಾಸಾಹೇಬ ಅವರಿಗೆ ಪರಿಚಯಿಸುವ ಕಾರ್ಯವನ್ನು ಸರ್ ಸಿದ್ದಪ್ಪ ಕಂಬಳಿ ಮತ್ತು ಶ್ರೀ ಎಸ ನಿಜಲಿಂಗಪ್ಪನವರು ಮಾಡಿದ್ದರು . ಇಂದು ಎಷ್ಟು ಜನ ಸಂಸತ್ತರು ಶಾಸಕರು ರಾಜಕಾರಣಿಗಳು ಇಂತಹ ಧೈರ್ಯ ಸ್ವಾಭಿಮಾನವನ್ನು ತೋರಬಲ್ಲರು.?
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ