ಶ್ವೇತ ವಸ್ತ್ರಧಾರಿ ಪ್ರತಿಮೆ ಸ್ಥಾಪಿಸಿ
ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರು
ಸಚಿವರು ಕರ್ನಾಟಕ ಸರಕಾರ
ಜಿಲ್ಲಾ ಉಸ್ತುವಾರಿ ಮಂತ್ರಿಗಳು
ವಿಜಯಪುರ ಇವರಿಗೆ
ವಿಷಯ- ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿನ ಅರೆಬೆತ್ತಲೆ ಅಕ್ಕ ಮಹಾದೇವಿಯ ಪ್ರತಿಮೆ ತೆರುವುಗೊಳಿಸಿ ಶ್ವೇತ ವಸ್ತ್ರಧಾರಿ ಪ್ರತಿಮೆ ಸ್ಥಾಪಿಸುವ ಕುರಿತು
ಮಾನ್ಯರೆ
ತಾವು ಲಿಂಗಾಯತ ಧರ್ಮ ಮಾನ್ಯತೆ ಅಲ್ಪ ಸಂಖ್ಯಾತ ಸ್ಥಾನಮಾನ ಬೇಡಿಕೆ ಹೋರಾಟದಲ್ಲಿ ಅಗ್ರ ಪಾತ್ರ ವಹಿಸಿದವರು. ಶರಣ ತತ್ವ ಮತ್ತು ಸಾಂಸ್ಕ್ರುತಿಕ ಚಿಂತನೆಯ ಬಗ್ಗೆ ಕಾಳಜಿ ಹೊಂದಿದವರು. ಕರ್ನಾಟಕದ ಏಕೈಕ ಮಹಿಳಾ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಆವರಣದಲ್ಲಿ
ಅಕ್ಕ ಮಹಾದೇವಿಯ ಅರೆ ಬೆತ್ತಲೆ ಪ್ರತಿಮೆ ನಿಲ್ಲಿಸಿರುವುದು ನಿಜಕ್ಕೂ ಶೋಚನಿಯ. ಪುರಾಣ ಪ್ರವಚನಗಳಲ್ಲಿ ಕೆಲ ಜಾತಿವಾದಿಗಳು ಅಕ್ಕಮಹಾದೇವಿಯವರನ್ನು ವಿವಸ್ತ್ರಗೊಳಿಸಲಾಗಿದೆ. ಅಂಗ ಶೀತಕೆ ಬಿಸುಟಿದ ಬಟ್ಟೆಗಳು ಉಂಟು ಎಂದು ಅಕ್ಕನ ವಚನದಲ್ಲಿ ಕಂಡು ಬರುತ್ತದೆ.
ಉಟ್ಟ ತಡಿ = ಉಡತಡಿ
ಹರಿಹರನು ಕೇಶಾ೦ಬರ ಉಟ್ಟುಕೊಂಡು ಬಂದಳು ಎಂದು ಹೇಳುತ್ತಾನೆ. ಕೇಶಾ೦ಬರ ಎಂದರೆ ಕಂಬಳಿ ಆಗಿರುತ್ತದೆ. ಹೀಗಿರುವಾಗ ಅಕ್ಕ ಮಹಾದೇವಿ ತಾಯಿಯನ್ನು ನಗ್ನವಾಗಿ ತೋರಿಸುವುದು ಅನಾಗರಿಕ ಮತ್ತು ಅಸಭ್ಯ ಸಂಸ್ಕೃತಿಯ ಪ್ರತೀಕ .ನೋವಿನ ಸಂಗತಿ ಎಂದರೆ ಬಹುತೇಕರ ದೃಷ್ಟಿಯಲ್ಲಿ ಅಕ್ಕ ಮಹಾದೇವಿ ಬೆತ್ತಲೆ ಬಂದಳು ಎನ್ನುವ ಕಲ್ಪನೆ ಇದೆ. ಜಗತ್ತಿನ ಸರ್ವ ಶ್ರೇಷ್ಠ ಮಹಿಳಾ ಕವಿ ಚಿಂತಕಿ ಲೇಖಕಿಗೆ ಅಪಮಾನ ಮಾಡುವುದು ಸರಿ ಅಲ್ಲ.
ಈ ಕೂಡಲೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿನ ಅರೆಬೆತ್ತಲೆ ಅಕ್ಕ ಮಹಾದೇವಿಯ ಪ್ರತಿಮೆ ತೆರುವುಗೊಳಿಸಿ ಶ್ವೇತ ವಸ್ತ್ರಧಾರಿ ಪ್ರತಿಮೆ ಸ್ಥಾಪಿಸಲು
ಅಕ್ಕನ ಅರಿವು ಬಸವ ತಿಳುವಳಿಕೆ ಮತ್ತು ಸಂಶೊಧನಾ ಕೇಂದ್ರ ಪುಣೆ ಮತ್ತು ಸಮಸ್ತ ಲಿಂಗಾಯತ ವೆಲ್ ಫೇರ್ ಟ್ರಸ್ಟ್ ಪುಣೆ ಇವುಗಳ ಸಂಘಟನೆಗಳು ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತೆವೆ.
ಶರಣಾರ್ಥಿ
-ಡಾ ಶಶಿಕಾಂತ ಪಟ್ಟಣ
ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೊಧನಾ ಕೇಂದ್ರ ಪುಣೆ
ಮಾಹಿತಿಗಾಗಿ
1)ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು
ಮುಖ್ಯ ಮಂತ್ರಿಗಳು
2)ಸನ್ಮಾನ್ಯ ಶ್ರೀ ಸುಧಾಕರ
ಸಚಿವರು ಹೆಚ್ಚಿನ ಶಿಕ್ಷಣ
3)ಸನ್ಮಾನ್ಯ ಶ್ರೀ ಶಿವರಾಜ್ ತಂಗಡಗಿ ಸಚಿವರು
ಕನ್ನಡ ಸಂಸ್ಕೃತಿ ಇಲಾಖೆ