ಲೋಕದ ಬೆಳಕು ನೀನು
ಬುದ್ಧ ಗುರುವನು ಆರಾಧಿಸು
ಬದುಕಿನ ಅರ್ಥವ ತಿಳಿಸಿದ
ಜ್ಞಾನ ಜ್ಯೋತಿಯನ್ನು ಬೆಳಗಿಸಿದ
ಲೋಕದ ಬೆಳಕು ನೀನು !!
ಶಾಂತಿ ಕರುಣೆ ಅಹಿಂಸೆ
ಸಂದೇಶ ಜಗತ್ತಿಗೆ ಸಾರಿದ
ಜನರಲ್ಲಿ ಪ್ರೀತಿಯ ಚಿಲುಮೆ
ಹರಿಸಿದ
ಲೋಕದ ಬೆಳಕು ನೀನು !!
ಸತ್ಯಶೋಧಕ್ಕಾಗಿ ಪ್ರಪಂಚದ
ಪರ್ಯಟನೆ ಮಾಡಿ
ಏಷ್ಯಾದ ಬೆಳಕಾಗಿ
ಪ್ರಜ್ವಲಿಸಿದ
ಲೋಕದ ಬೆಳಕು ನೀನು!!
ಆಸೆಯೇ ದುಃಖಕ್ಕೆ ಮೂಲವೆಂದು
ಸಿದ್ಧ ಮಂತ್ರವನ್ನು ಜಗತ್ತಿಗೆ ಸಾರಿ
ಮಹಾ ಬೆಳಕಾಗಿ ಚೈತನ್ಯದ ಶಿಲೆಯಾಗಿರುವ
ಲೋಕದ ಬೆಳಕು ನೀನು!!
ಜನನ ಜ್ಞಾನೋದಯ ಮತ್ತು ಮೋಕ್ಷದ ಸಂಗಮವಾದ ದಿನವೇ
ಬುದ್ಧ ಪೂರ್ಣಿಮಾ
ಲೋಕವೆಲ್ಲ ಬೆಳಕಾಗಿ ಬೆಳಗಿದ
ಲೋಕದ ಬೆಳಕು ನೀನು
ಲೋಕದ ಬೆಳಕು ನೀನು
–ಸ್ವರೂಪರಾಣಿ ಎಸ್. ನಾಗೂರೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಬೀದರ್