ಬುದ್ಧನೇಕೆ ನಕ್ಕ
ಬುದ್ಧನೇಕೆ ನಕ್ಕ
ಪಾಪ ಅವನಿಗೂ
ಹೆಂಡರು ಮಕ್ಕಳು
ಬಿಟ್ಟು ಹೊರಟ
ಕಾಡಿಗೆ
ಅನುಭವ ಅರಿವಿನ
ಹುಡುಕಾಟ
ಸತ್ಯ ಸಮತೆ ಶಾಂತಿ
ಪ್ರೀತಿ ಅವನ ಮಂತ್ರ
ಬೋಧಿ ವೃಕ್ಷದ ಕೆಳಗೆ
ಜ್ಞಾನ ದೀವಿಗೆ ಜ್ಯೋತಿ
ಅಹಿಂಸಾ ಮೂರ್ತಿ
ವಿಶ್ವಕ್ಕೆ ಪಸರಿಸಿದನು
ಮಾನವ ಪ್ರೀತಿ
ಪೋಖ್ರಾನ್ ನಲ್ಲಿ
ಅಣು ಬಾಂಬ್ ಪರೀಕ್ಷೆ
ಕಂದಹಾರದಲ್ಲಿ ಉಗ್ರರ
ಅಟ್ಟ ಹಾಸ ದಾಳಿ
ತುಂಡಾಗಿ ಬಿದ್ದ ಬುದ್ಧ
ಸಮರಸದ ತೋಟದಲ್ಲಿ
ರಕ್ತ ಕೋಡಿ ಹರಿಯಿತು
ಭಾಷಣ ಲೇಖನಕೆ
ವಸ್ತುವಾದ ಸಿದ್ಧಾರ್ಥ
ಬುದ್ಧ ಶರಣಂ ಗಚ್ಛಾಮಿ
ಕೆಡುವಿದರು ಸನಾತನಿಗಳು
ವಿಹಾರ ಬುದ್ಧ ಮೂರ್ತಿ
ಭಾರತ ಬಿಟ್ಟ ಮಂದಹಾಸ
ಬುದ್ಧನೇಕೆ ನಕ್ಕ ನನ್ನ ಪ್ರಶ್ನೆ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ