ಬೂಕರ್ ಪ್ರಶಸ್ತಿ – 2025
ಬಾನಂಗಳದಲ್ಲಿ ಬಾನುವಿನ ಹೆಸರು ತೇಲಾಡುತ್ತಿರುಲು
ವಿಶ್ವದಲ್ಲೆಡೆ ಬಾನು ಮುಷ್ತಾಕ್
ಮತ್ತು ದೀಪಾ ಭಸ್ತಿಯ ಹೆಸರುಗಳು
ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಆಗಿ ಬೆಳಗುತಿರಲು
ಕನ್ನಡವ ಎತ್ತಿ ಹಿಡಿದು
ವಿಶ್ವದಲ್ಲೆಡೆಯಲ್ಲಿ ಕಂಪು ಸೂಸತಿರಲು
ವಿಶ್ವಮಾನ್ಯತೆ ಪಡೆದ ಅದ್ಭುತ ಸವಿಘಳಿಗೆಯಿದು
ಸುವರ್ಣಾಕ್ಷರಗಳಲ್ಲಿ ಬರೆದ ಇತಿಹಾಸವಿದು
ಸಣ್ಣ ಕಥೆಗಳ ಮೂಲಕವೇ
ದೊಡ್ಡ ಕಥನವನ್ನು ಸೃಷ್ಟಿಸಿದ ಬಾನು ಮುಷ್ತಾಕ್
ಅಷ್ಟೇ ಚೆನ್ನಾಗಿ ಅನುವಾದಿಸಿದ ದೀಪಾ ಭಸ್ತಿ
ಅವರ ಸಾಧನೆ
ಮಹಿಳಾ ಸಾಹಿತ್ಯಕ್ಕೆ ಹೆಬ್ಬಾಗಿಲು ತೆರೆದಿದೆ…
12 ಕಥೆಗಳ ಗುಚ್ಚವು
ಎದೆಯ ಹಣತೆಯಾಗಿ ಬೆಳಗಿ
ಪ್ರಜ್ವಲಿಸುತ್ತಿರಲು.
Heart lamp ಪ್ರಕಟಿಸಿದ ಪೆಂಗ್ಫಿಂಗ್ ಪ್ರಕಾಶನಕ್ಕೆ ಅಭಿನಂದನೆಗಳು…
ಲಂಡನ್ ನಲ್ಲಿ ದೊರೆತ ಪ್ರತಿಷ್ಟಿತ
ಬೂಕರ್ ಪ್ರಶಸ್ತಿ ಮುಡಿಗೇರಿಸಿದ
ಹಾಸನದ ಭಾನು ಮುಸ್ತಾಕ್
ಕೊಡಗಿನ ಚೆಲುವೆ ದೀಪಾ ಭಸ್ತಿ
ಎಲ್ಲಾ ಕನ್ನಡಿಗರಿಂದ ಅಭಿಮಾನದ ಅಭಿನಂದನೆಗಳು
–ಸ್ವರೂಪರಾಣಿ