ಮೇ – 24 ರಾಷ್ಟ್ರೀಯ ಸಹೋದರರ ದಿನ
ಜೀವನದಲ್ಲಿ ನಾವು ಯಾರೊಂದಿಗಾದ್ರೂ ಹೆಚ್ಚು ಕೀಟಲೆ ಮಾಡ್ತೀವಿ, ತೊಂದರೆ ಕೊಡ್ತೀವಿ ಅಂದ್ರೆ ಬಹುಶಃ ಅದು ನಮ್ಮ ಅಣ್ಣ-ತಮ್ಮಂದಿರೊಂದಿಗೆ ಮಾತ್ರ. ಸದಾ ಜಗಳವಾಡುತ್ತಾ, ಬೈದಾಡಿಕೊಳ್ಳುತ್ತಾ ಇರುವ ಈ ಸಂಬಂಧದಲ್ಲಿ ವಿವರಿಸಲಾಗದಷ್ಟು ಪ್ರೀತಿಯೂ ಇರುತ್ತದೆ. ಅಣ್ಣ-ತಮ್ಮಂದಿರು ನಮ್ಮ ಬದುಕಿನ ಸೈನಿಕರಂತೆ ಎಂದರೂ ತಪ್ಪಾಗಕ್ಕಿಲ್ಲ. ನಾವಷ್ಟೇ ಜಗಳ ಮಾಡಿದರೂ ಬೇರೆಯವರ ಎದುರು ನಮ್ಮನ್ನು ಬಿಟ್ಟುಕೊಡದ ನಿಸ್ವಾರ್ಥ ಪ್ರೀತಿ ಅವರದ್ದು. ಇಂತಹ ಪರಿಶುದ್ಧ ಪ್ರೀತಿ ನೀಡುವ ಸಹೋದರರ ಬಾಂಧವ್ಯವನ್ನು ಗೌರವಿಸುವ ದಿನವನ್ನು ರಾಷ್ಟ್ರೀಯ ಸಹೋದರರ ದಿನ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.
ಸಹೋದರರು ನಮ್ಮ ಪಾಲಿಗೆ ದೇವರು ನೀಡಿದ ಆಶೀರ್ವಾದ ಎಂದರೂ ತಪ್ಪಾಗಲಿಕ್ಕಿಲ್ಲ. ನಮ್ಮ ಅಪರಾಧದಲ್ಲಿ ಭಾಗಿಯಾಗಿ, ನಮ್ಮ ತಪ್ಪನ್ನೆಲ್ಲಾ ತನ್ನ ತಲೆ ಮೇಲೆ ಹಾಕಿಕೊಂಡು ನಮ್ಮನ್ನು ರಕ್ಷಿಸುವ, ಸದಾ ನಮಗೆ ಬೆಂಬಲ ನೀಡುತ್ತಾ, ನೋವಿಗೆ ಹೆಗಲಾಗುವ ಸಹೋದರರ ಪ್ರೀತಿ ಅವ್ಯಕ್ತ ರೂಪದಲ್ಲಿ ಇರುವುದು ಸುಳ್ಳಲ್ಲ. ಸಹೋದರರ ಜೊತೆ ಕಳೆದ ಕ್ಷಣಗಳು ನಿಮಗೆ ಅದೆಷ್ಟೋ ದಿನಗಳು ಕಳೆದರು ಮಾಸುವುದಿಲ್ಲ. 8 ವರ್ಷದವರಿದ್ದಾಗ ಸಹೋದರರ ಜೊತೆ ಕಳೆದ ನೆನಪುಗಳು 80 ವರ್ಷ ಕಳೆದರೂ ಹಸಿರಾಗಿಯೇ ಇರುತ್ತದೆ. ಇಂತಹ ಅಣ್ಣ-ತಮ್ಮಂದಿರ ಮಧುರ ಬಾಂಧವ್ಯವನ್ನು ಮೆಲುಕು ಹಾಕುವ ಈ ವಿಶೇಷ ದಿನದ ಇತಿಹಾಸ, ಮಹತ್ವ ತಿಳಿಯುವ ಜೊತೆಗೆ ನಿಮ್ಮ ಅಣ್ಣ-ತಮ್ಮಂದಿರಿಗೆ ಡಿಫ್ರೆಂಟ್ ಆಗಿ ಹೇಗೆ ವಿಶ್ ಮಾಡಬಹುದು ಎಂದು ಮಾಹಿತಿಯೂ ಇಲ್ಲಿದೆ.
ಪ್ರತಿ ವರ್ಷ ಮೇ ತಿಂಗಳ 24ನೇ ತಾರೀಕಿನಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸಹೋದರರ ದಿನ ಶನಿವಾರ ಬಂದಿದೆ. ಸಹೋದರರ ದಿನದ ಆಚರಣೆ 2005 ರಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಈ ದಿನದ ಬಗ್ಗೆ ಇರುವ ಸ್ವಲ್ಪವೇ ಮಾಹಿತಿಯ ಪ್ರಕಾರ ಅಲಬಾಮಾದ ಸಿ. ಡೇನಿಯಲ್ ರೋಡ್ಸ್ ಅವರು ಸಹೋದರರ ದಿನವನ್ನು ಆಚರಿಸಲು ಕರೆ ನೀಡಿದರು