ಸೋದರತ್ವದ ದಿನ
ಸಾದರದ ಸೋದರತ್ವದಿ
ಸೋದರಿ ಪ್ರೇಮ ಮಣಿಹ
ಹೊತ್ತ- ಪಡೆದ ಸೋದರರ
ಹಿರಿಮೆ ಗರಿಮೆ ಬಲು ಶ್ರೇಷ್ಠ…
ಒಡಹುಟ್ಟ ಸೋದರರು
ಪಾಲು ಎಲ್ಲದರಲಿ ಕೇಳಿದರು
ಪಡೆದ ಅಣ್ಣ ತಮ್ಮಂದಿರು
ಮೆರೆದಾರ ಅರರ್ತಿಯಲ್ಲಿ …
ಹಸನ್ಮುಖಿಯ ಸೋದರರು
ನೂರು ವರ್ಷ ಸುಖವಾಗಿರು
ನಮ್ಮ ತಂಗ್ಯವ್ವ- ಹರಸ್ಯಾರು
ಹಸನಾದ ಮನವಿಂದಾರರು..
ಬದ್ಧ ಕಷ್ಟ ಸಂಸಾರದಲಿ
ಬಿದ್ದು ಓಲಾಡದಿರು ಅಲ್ಲಿ
ಅಂದಾರ ಪಡೆದವರು-ಹಿತನುಡಿ
ಹೊತ್ತು ಮಾತೃ ಪ್ರೇಮದಲಿ…
ದೃಢ ಮನದ ಗಂಡೆದೆಯರು
ದ್ರುತಿಗೆಡದೆ ಮುಂದೆ ನಡೆ
ಎಂದಾರ- ಹಿಂದೆ ನಾವೆಂದಿಗೂ,
ಹಿಂದೆ ನಿಂದ- ಗಟ್ಟೆದೆ ಗಟ್ಟಿಗರು …
ಹಿಂಜರಿದರೆ ಎತ್ತಿ ಹಿಡಿದವರು
ಹೊತ್ತು ಹೊತ್ತಿಗೆ ಮಮತೆಯ
ತುತ್ತು ಮಾಡಿ ಉಣಸ್ಯಾರು
ಪಡೆದ ಅಣ್ಣ ತಮ್ಮಂದಿರು …
ತಂದೆ ತಾಯಿಯ ಮರಿಶ್ಯಾರ್
ಹೊತ್ತಾರ ಕಷ್ಟ. ತಮ್ಮದೆಂದು
ಭಾರಿ ಭಾರ ಎತ್ತಿ ಇಳಿವ್ಯಾರ
ಧಾತ್ರಿಯೋಳು ನಿನ್ನ ಆಶೀರ್ವಾದ…
ಒಂದೇ ಸಾಕು ಎಂದು ಪೇಳ್ಯಾರ
ನಿಸ್ಸೀಮದ ಅಸ್ಸೀಮ ಪಡೆದ ಸೋದರರು….
–ಸವಿತಾ ದೇಶಮುಖ್