ಸುವರ್ಣಾ ಚಿಮಕೊಡೆಯವರಿಗೆ ಪ್ರಶಸ್ತಿ ಪ್ರಧಾನ – ಕರುಳಿನ ಕಗ್ಗ ಪುಸ್ತಕ ಬಿಡುಗಡೆ

ಸುವರ್ಣಾ ಚಿಮಕೊಡೆಯವರಿಗೆ ಪ್ರಶಸ್ತಿ ಪ್ರಧಾನ – ಕರುಳಿನ ಕಗ್ಗ ಪುಸ್ತಕ ಬಿಡುಗಡೆ 

e- ಸುದ್ದಿ ಬಸವಕಲ್ಯಾಣ

ಇತ್ತೀಚಿಗೆ ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿವತಿಯಿಂದ ನಡೆದ ಡಾ.ಜಯದೇವಿತಾಯಿ ಲಿಗಾಡೆಅವರ 114ನೇ ಜಯಂತಿ ಕಾರ್ಯಕ್ರಮ.
ಕಾರ್ಯಕ್ರಮ ಜರುಗಿತು.

*ಡಾ. ಜಯದೇವಿ ತಾಯಿ ಲಿಗಾಡೆ ಸಮಾಧಿಗಳಿಗೆ ಪೂಜೆ ಅನ್ನ ಸಂತರ್ಪಣೆ
*ಸುವರ್ಣಾ ಚಿಮಕೊಡೆಯವರಿಗೆ ಪ್ರಶಸ್ತಿ ಪ್ರಧಾನ
*ಕರುಳಿನ ಕಗ್ಗ ಪುಸ್ತಕ ಬಿಡುಗಡೆ (ಲೇಖಕರು. ಶರಣೆ ಲಲ್ಲೇಶ್ವರಿ ತಾಯಿ ಮೂಗಿ)
*ಧರ್ಮ ಪಿತಾ ವಿಶ್ವಗುರು ಬಸವಣ್ಣ (ಪ್ರೊಫೆಸರ್ ಸಿದ್ದಣ್ಣ ಲಂಗೋಟಿ)
*ವೈರಾಗ್ಯ ನಿಧಿ ಅಕ್ಕಮಹಾದೇವಿ (ವಿಜಯಲಕ್ಷ್ಮಿ ಕೌಟಿಗಿ)
2025 ಸಾಲಿನ ಡಾ. ಜಯದೇವಿತಾಯಿ ಪ್ರಶಸ್ತಿ ಬೀದರ ರ್ಪ್ರವಚನಕಾರ್ತಿ ಸುವರ್ಣ ಚಿಮಕೋಡಿ ಅವರಿಗೆ ಪ್ರದಾನ ಮಾಡಲಾಯಿತು.
ಅವರು ಮಾತನಾಡುತ್ತ ಜಯದೇವಿ ತಾಯಿ ಕುಟುಂಬಕಷ್ಟ ಸೀಮಿತರಾಗಿರದೆ ಸಮಾಜ ಸೇವಕಿ ಕನ್ನಡ ಹೋರಾಟಗಾರರು ಮತ್ತು ಧರ್ಮ ಕಾರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು. ಕರ್ನಾಟಕದ ಏಕೀಕರಣದಲ್ಲಿ ಹೋರಾಡಿದವರು. ನಮ್ಮೆಲ್ಲ ಮಹಿಳೆಯರಿಗೆ ದಾರಿದೀಪವಾಗಿದ್ದಾರೆ ಎಂದರು. ಗಡಿನಾಡ ಸಿಂಹಿಣಿ ಅಂತ ಅತ್ಯಂತ ಕಳಕಳಿಯಿಂದ ಮಾತನಾಡಿದ ಅಕ್ಕಲಕೋಟದ ಪ್ರೊ.ಗುರುಲಿಂಗಪ್ಪ‌ .ದಬಾಲಿ
ಜಯದೇವಿ ತಾಯಿಯವರು ಸೊಲ್ಲಾಪುರವು ಕರ್ನಾಟಕಕ್ಕಾಗಿ ಸೇರಿಸುವುದಕ್ಕಾಗಿ ಸತತವಾಗಿ ದುಡಿದ ಮಹಾಶರಣಿ ಅವರ ತವರಿನ ಮನೆ ಅರಮನೆಯ ವೈಭವದಲಿ ನಿಂತಿದ್ದು, ಗಂಡನ ಮನೆಯಲ್ಲಿ ಸಾಕಷ್ಟು ಸಿರಿವಂತಿಕೆಲ್ಲಿದ್ದರೂ ಕೊನೆಯ ಕಾಲದಲ್ಲಿ ಬಸವಕಲ್ಯಾಣದ ಭಕ್ತಿ ಭವನ ನಿರ್ಮಿಸಿ ಅಲ್ಲೇ ಉಳಿದು ಸರಳ ಜೀವನದ ಶರಣ ಸಂಸ್ಕೃತಿಯನ್ನು ಅನುಸರಿಸಿದ ನಿಜವಾದ ಶರಣೆ ಅಲ್ಲಿಯೇ ತಮ್ಮ ಕೊನೆಯ ದಿನಗಳನ್ನು ಕೂಡ ಕಳೆದರೂ ,ಸೊಲ್ಲಾಪುರ ಕರ್ನಾಟಕಕ್ಕೆ ಸೇರ್ಪಡೆಯಾಗದೆ ಹೋದಾಗ ಅತ್ಯಂತ ನೋವು ಪಟ್ಟು ಕರ್ನಾಟಕದ ಭೂಮಿ ಬಸವನ ಕಲ್ಯಾಣದಲ್ಲಿ ಬಂದು ನೆಲೆಸಿದರು .
ಸವಿತಾ ದೇಶಮುಖರು ಪ್ರಾಸ್ತಾವಿಕ ನುಡಿ ಮಾತನಾಡುತ ಜಯದೇವಿ ತಾಯಿಯವರು ನಾಲ್ಕನೇ ಇಯತೆ ಮರಾಠಿ ಕಲಿತು ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಧೀಮಂತ ಗಡಿನಾಡ ಕನ್ನಡತಿ ಅಂತ ವರ್ಣಿಸಿದರು , ಜಯದೇವಿತಾಯಿ ಹಾಗೂ ಅವರ ಮಗಳು ಶರಣೆ ಲಲ್ಲೇಶ್ವರಿತಾಯಿಯವರ ಅಪ್ರಕಟಿತ ಗ್ರಂಥಗಳನ್ನು ಹಾಗೂ ಇನ್ನುಳಿದ ಪ್ರಕಟಿತ ಗ್ರಂಥಗಳನ್ನು ಮರು ಪ್ರಕಟಣೆಗೊಳಿಸುವ ಬಗ್ಗೆ ಒತ್ತು ಕೊಟ್ಟರು ಅವರ ಅಜ್ಜಿ ಹಾಗೂ ತಾಯಿಯ ಕನಸನ್ನು ನನಸು ಮಾಡುವ ಇಚ್ಚೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸವಿತಾ ದೇಶಮುಖರು ಸಂಪಾದಿಸಿದ ಕೃತಿ ಕರುಳಿನ ಕಗ್ಗ ಬಿಡುಗಡೆಗೊಂಡಿತು. ಜೊತೆಯಲ್ಲಿ ಪ್ರೊಫೆಸರ್ ಸಿದ್ದಣ್ಣ ಲಂಗೋಟಿಯವರು ಬರೆದ ಧರ್ಮ ಪಿತಾ ವಿಶ್ವಗುರು ಬಸವಣ್ಣ ಹಾಗೂ ವಿಜಯಲಕ್ಷ್ಮಿ ಅವರ ವೈರಾಗ್ಯ ನಿಧಿ ಅಕ್ಕಮಹಾದೇವಿ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ನಾಡೂಜಿ ಬಸವಲಿಂಗ ಪಟ್ಟಂತೆ ಅವರು ಭಾಲ್ಕಿ ಅನುಭವ ಮಂಟಪ ಅಧ್ಯಕ್ಷರು ಮಾತನಾಡಿ ತಾಯಿಯವರು ಕನ್ನಡ ನಾಡ ನುಡಿಗಾಗಿ ತಮ್ಮ ಜೀವನವನ್ನು ಸವಿಸಿದರು ಅವರು ಅನುವಾದಿಸಿದ ಮರಾಠಿ ಭಾಷೆಯಲ್ಲಿ ವಚನಗಳವಿವರಿಸಿ ತಿಳಿಸಿದರು ಶ್ರೀ ಗುರುಬಸವ ಮಹಾಸ್ವಾಮಿಗಳು ಮಾತನಾಡುತ್ತಾ ತಾಯಿಯವರ ಜೀವನದ ಆಗುಹೋಗುಗಳನ್ನು ಮಾತನಾಡಿ ಹಾಗ ಶ್ರೀಮತಿ ಸುವರ್ಣ ಚಿಮಕೋಡಿ ಅವರಿಗೆ ಅಭಿನಂದಿಸಿ . ತಾಯಿ ಹಾಗೂ ಅಜ್ಜಿಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದ ಮೂಗಿ ಸಹೋದರಿಯರಿಗೆ ಅಭಿನಂದಿಸಿದರು .ಸವಿತಾ ದೇಶ್ಮುಖ ಸಂಪಾದಿಸಿದ ಕರುಳಿನ ಕಗ್ಗ ತಾಯಿಯ ಪುಸ್ತಕವನ್ನು ಪ್ರಕಟಗೊಳಿಸಿದ್ದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿದರು .
ಈ ಕಾರ್ಯಕ್ರಮದಲ್ಲಿ ಭಾಲ್ಕಿ ಗುರುಬಸವ ಪಟ್ಟದೇವರು ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ , ಚೇತನ ಪಾಟಿಲ,ಡಾ. ಸಂಗೀತ ರಮೇಶ್ ಮಂಟಾಳೆ, ನವಲಿಂಗ ಕುಮಾರ್ ಪಾಟೀಲ, ಸೋಮನಾಥ ಯಾಳವರ, ಜಯದೇವಿ ತಾಯಿ ಅವರ ಸೊಸೆ ಮಧುಮಾಲಾ ಲಿಗಾಡೆ ,ವೈಜನಾಥ ಕಾಮಶೆಟ್ಟಿ ,ಗುರುನಾಥಪ್ಪ ಸಜ್ಜನ್,ಕಾಶಿಬಾಯಿ ಬಸಲಿಂಗಪ್ಪ .ಸಜ್ಜನ, ರಾಜಕುಮಾರ್ ಹೂಗಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

Don`t copy text!