ಯೋಗಶ್ರೀ ರಾಯಚೂರು ಕಿಂಗ್ಸ್ ಗೆ ಸೂಪರ್ 16 ರಲ್ಲಿ ಭರ್ಜರಿ ಜಯ
e- ಸುದ್ದಿ ಬೆಂಗಳೂರು
*ಸ್ಥಳ: ಆಚಾರ್ಯ ಕ್ರಿಕೆಟ್ ಸ್ಟೇಡಿಯಂ, ಸೊಲ್ಲದೇವನಹಳ್ಳಿ, ಬೆಂಗಳೂರು
*ದಿನಾಂಕ: 19-11-2026
*ರಾಯಚೂರು ಜನತೆಯಿಂದ ಶುಭ ಹಾರೈಕೆಗಳು – ಫೈನಲ್ ಮ್ಯಾಚ್ ಜಯಶಾಲಿಯಾಗಿ ಬನ್ನಿ
ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ – ಸೀಸನ್ 03 ರ ಸೂಪರ್ 16 ಪಂದ್ಯದಲ್ಲಿ ಯೋಗಶ್ರೀ ರಾಯಚೂರು ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರ ಇಮ್ತಿಯಾಜ್ ಖುರೇಷಿ ಕೇವಲ 32 ಎಸೆತಗಳಲ್ಲಿ 97 ರನ್ ಗಳಿಸಿ ಹಾಗೂ 136 ಟೀಮ್ ಸ್ಕೋರ್ ಇತಿಹಾಸ ಸೃಷ್ಟಿಸಿದ್ದಾರೆ. ಇದು 1,2,3ನೇ ಸೀಸನ್ನ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ತಂಡವು 75 ರನ್ ಹಾಗೂ 9 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ವಿಜೇತ ತಂಡದ ಆಟಗಾರರು:
ಸೋನು ಕುಮಾರ್, ಶೋಯೆಬ್ ಖುರೇಷಿ, ಇಮ್ತಿಯಾಜ್ ಖುರೇಷಿ, ಜಗದೀಶ್, ಮೊಹಮ್ಮದ್ ಜಾಕ್, ಅಭಿಷೇಕ್, ನಿಸಾರ್ ಅಹ್ಮದ್, ಕುಪ್ಪಣ್ಣ, ಪಡಂಗು ನಾಯಕ್, ಪ್ರದೀಪ್ ಜಿ, ರವಿ, ತಿಮೋತಿ, ಮಂಜು ಕಟೋರಿ, ಶಾಹಿದ್ ಶೈಕ್, ಮೊಹಮ್ಮದ್ ಅನಿಫ್
ಇಡೀ ತಂಡದ ಒಗ್ಗಟ್ಟು, ಶ್ರಮ ಮತ್ತು ಹೋರಾಟದ ಮನೋಭಾವವೇ ಈ ಜಯಕ್ಕೆ ಕಾರಣ.
ತಂಡದ ಮಾಲೀಕರು:
*ಮಾಲೀಕರು : ಯೋಗಶ್ರೀ ಮಲ್ಲಣ್ಣ (ವಿಶ್ವ ದಾಖಲೆ ವಿಜೇತರು)
– *ಮಾಲೀಕರು: ವಾಣಿಶ್ರೀ ಟಿ.
– ಸಹ ಮಾಲೀಕರು ಸರ್ವೋರ್ ಹಾಗೂ ಅಜಯ್ ಗೌಡ
ಈ ಜಯಕ್ಕೆ *ರಾಯಚೂರು ಜಿಲ್ಲೆಯ ಸಮಸ್ತ ಜನತೆ, ಅಭಿಮಾನಿಗಳು, ಹಿತೈಷಿಗಳು ಹೃತ್ಪೂರ್ವಕ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಫೈನಲ್ ಪಂದ್ಯದಲ್ಲೂ ಇದೇ ರೀತಿ ಆಡಿ, ಕಪ್ ಗೆದ್ದು ರಾಯಚೂರಿಗೆ ಕೀರ್ತಿ ತರಲಿ ಎಂದು ಎಲ್ಲರೂ ಹಾರೈಸಿದ್ದಾರೆ.
*ಫೈನಲ್ ಮ್ಯಾಚ್:
*ಸ್ಥಳ: ಆಚಾರ್ಯ ಕ್ರಿಕೆಟ್ ಸ್ಟೇಡಿಯಂ, ಸೊಲ್ಲದೇವನಹಳ್ಳಿ, ಬೆಂಗಳೂರು
*ಫ್ರೀ ಟಿಕೆಟ್ಸ್ ಗಾಗಿ ಸಂಪರ್ಕಿಸಿ:
*99518015666 / 9108763296 / 9036038335
ಫೈನಲ್ ಮ್ಯಾಚ್ ಜಯಶಾಲಿಯಾಗಿ ಬನ್ನಿ, ರಾಯಚೂರು ಕಿಂಗ್ಸ್! 🙏💐*
