ಕವಿ ಈಶ್ವರ ಮಮದಾಪೂರ ಇವರಿಗೆ ” ಚುಟುಕು ಸಿರಿ ” ಪ್ರಶಸ್ತಿ.
e ಸುದ್ದಿ ಗೋಕಾಕ
ಗೋಕಾವಿ ಗೆಳೆಯರ ಬಳಗ ಮತ್ತು
ಚುಟುಕು ಸಾಹಿತ್ಯ ಪರಿಷತ್ ಗೋಕಾಕ
ಆಶ್ರಯದಲ್ಲಿ ಗೋಕಾಕ ತಾಲೂಕಿನ ಮೆಳವಂಕಿಯಲ್ಲಿಯ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕಾವಿ ನೆಲದ ಚುಟುಕು ಸಾಹಿತಿ ಹಾಗೂ ಗಜಲ್ ಕವಿ ಈಶ್ವರ ಮಮದಾಪೂರ ಇವರಿಗೆ ” ಚುಟುಕು ಸಿರಿ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈಶ್ವರ ಮಮದಾಪೂರ ಇವರು ಗೋಕಾಕ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದು ಸದ್ಯ ಕಾರ್ಯಾಧ್ಯಕ್ಷರಾಗಿದ್ದಾರೆ. ಚುಟುಕು ಸಾಹಿತ್ಯ ಪ್ರಕಾರದಲ್ಲಿ ಮಮದಾಪೂರ ಚುಟುಕುಗಳು, ಮಮದಾಪೂರ ಹನಿಗವಿತೆಗಳು, ಹೈಕು ಸಂಕಲನ ಹಾಗೂ ಈಶ್ವರನ ದ್ವಿಪದಿಗಳು ಸಹಿತ ಎರಡು ಗಜಲ್ ಕೃತಿಗಳು ಸೇರಿದಂತೆ ಒಟ್ಟು ಹತ್ತು ಕೃತಿಗಳನ್ನು ನೀಡಿದ್ದಾರೆ.
ಈಗಾಗಲೇ ಸಾಹಿತ್ಯ, ಸಂಘಟನೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಇವರಿಗೆ ” ಚುಟುಕು ಸಿರಿ ” ದೊರೆತಿರುವುದಕ್ಕೆ ಇವರ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿಯ ಮಿತ್ರರು ಖುಷಿ ವ್ಯಕ್ತ ಪಡಿಸಿದ್ದಾರೆ.
” ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಸಂಸ್ಥಾಪಕರು ಆಗಿರುವ ಇವರು ಹಲವು ದಶಕಗಳಿಂದ ತಾಲ್ಲೂಕು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು ಹೆಮ್ಮೆಯ ಸಂಗತಿ “ಎಂದು ಗೋಕಾವಿ ಗೆಳೆಯರ ಬಳಗದ ಸಂಚಾಲಕರಾದ ಜಯಾನಂದ ಮಾದರ ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರಕಾಶ ಕೋಟಿನ ತೋಟ, ಚು ಸಾ ಪ ಜಿಲ್ಲಾ ಕಾರ್ಯದರ್ಶಿ ಬಸವರಾಜ ಗಾರ್ಗಿ, ಚುಸಾಪ ತಾಲೂಕಾ ಅಧ್ಯಕ್ಷ ಜಯಾನಂದ ಮಾದರ, ಶ್ರೀಮತಿ ಪುಷ್ಪಾ ಶಹಮಾನೆ, ಎಲ್ ಎಸ್ ಚೌರಿ, ಈಶ್ವರಚಂದ್ರ ಬೆಟಗೇರಿ, ಶ್ರೀಮತಿ ರಜನಿ ಜಿರಗ್ಯಾಳ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಡಪ್ಪಾ ಗಾಡಿವಡ್ಡರ, ಕುಮಾರಿ ವಾಣಿ ಗಡ್ಡಿಹೊಳಿ, ವಿದ್ಯಾ ರೆಡ್ಡಿ, ಡಾ.ಅರುಣ ಸವತಿಕಾಯಿ, ಮುಖ್ಯ ಶಿಕ್ಷಕ ಎಂ. ಬಿ. ಕಳ್ಳಿಮನಿ, ಈರಣ್ಣ ಕಡಕೋಳ, ಶಿವರಾಯ ಬಬಲಿ, ಬಸವರಾಜ ಮುಂಡಿಗನಾಳ, ಗೋಪಾಲ ಶೆಟ್ಟಿ, ಎಸ್ ಆರ್, ನಲವಡೆ ಹಾಗೂ ಆನಂದ ಸೊರಗಾವಿ ಇದ್ದರು.
