ಶ್ರೀ ರಾಮ ದೂತ 

 

 

 

 

 

 

 

 

 

ಆದೇಶ ಹೊತ್ತಾನ
ಹನುಮ ಹುಡುಕಲು ನಡಿತಾನ

ಎಲ್ಲಾ ಕಡೆ ಹುಡುಕ್ಯಾನ
ತುಂಬಾ ಚಿಂತಿಲಿ ಇದ್ದಾನ

ಹುಡುಕುತ ತಿರಾಗ್ಯನ
ಸಾಗರದೆಡೆ ಬಂದಾನ

ಸಾಗರ ರಾಜ ದಾರಿ ಕೊಟ್ಟಾನ
ಹನುಮ ಸಾಗರ ದಾಟ್ಯಾನ

ಲಂಕೆಗೆ ಕಾತರದಿ ಬಂದಾನ
ಎಲ್ಲಾ ಕಡೆಗೆ ಹುಡುಕ್ಯಾನ

ಅಶೋಕ ವನಕ ಬಂದಾನ
ಒಬ್ಬ ಗ್ರಹಿಣಿಯ ಕಂಡಾನ

ಚಿಂತೆಯಲಿರುವದ ಕಂಡಾನ
ಸೀತಾಮಾತೆ ಎಂದು ತಿಳದಾನ

ಹತ್ತಿರ ಬಂದು ನಮಿಸ್ಯಾನ
ವಿಷಯ ಎಲ್ಲ ಹೇಳ್ಯಾನ

ರಾಮ ಕೊಟ್ಟ ಗುರ್ತು ಕೊಟ್ಟಾನ
ನಮಿಸುತ ನಮಿಸುತ ನಿಂದಾನ

ಶ್ರೀ ರಾಮನ ಕರೆ ತರುವೆ ಎಂದಾನ
ತಿರುಗಿ ರಾಮನೆಡೆ ಬಂದಾನ

ಮಾತೆ ಕೊಟ್ಟ ಗುರ್ತು ನಿಡ್ಯಾನ
ವಂದಿಸಿ ವಂದಿಸಿ ಆಶೀರ್ವಾದ
ಬೆಡ್ಯಾನ.

ಕೃಷ್ಣ ಬೀಡಕರ.. ವಿಜಯಪುರ

Don`t copy text!